ಕ್ರೈಸ್ಟ್ ಚರ್ಚ್: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಎಡ ಪಾದದಲ್ಲಿ ಊತ ಕಾಣಿಸಿಕೊಂಡಿರುವ ಹಿನ್ನೆಲೆ ಅಭ್ಯಾಸದಿಂದ ದೂರವಿದ್ದು, ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ನಿಂದ ಹೊರಗುಳಿಯುವ ಸಾಧ್ಯತೆ ಇದೆ.
ಶನಿವಾರದಿಂದ ನ್ಯೂಜಿಲ್ಯಾಂಡ್ ಹಾಗೂ ಭಾರತದ ನಡುವೆ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದೀಗ ಪೃಥ್ವಿ ಶಾ ಕಾಲುನೋವಿಗೆ ತುತ್ತಾಗಿರುವುದು ಭಾರತ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
ಬಿಸಿಸಿಐ ಮೂಲಗಳ ಪ್ರಕಾರ ಶಾ ಗುರುವಾರ ತಮ್ಮ ಕಾಲಿನ ಊತಕ್ಕೆ ಕಾರಣ ತಿಳಿದುಕೊಳ್ಳಲು ರಕ್ತ ಪರೀಕ್ಷೆ ಮಾಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಪರೀಕ್ಷೆಯಲ್ಲಿ ವರದಿ ಪೃಥ್ವಿ ಶಾ ಪರವಾಗಿ ಬಂದರೆ ಶುಕ್ರವಾರ ಆಭ್ಯಾಸಕ್ಕಿಳಿಯಲಿದ್ದಾರೆ. ಆ ವೇಳೆ ಬ್ಯಾಟಿಂಗ್ ನಡೆಸಲು ಪೃಥ್ವಿ ಶಾರಿಂದ ಸಾಧ್ಯವಾಗದಿದ್ದರೆ ಶನಿವಾರ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.