ಕರ್ನಾಟಕ

karnataka

ETV Bharat / sports

ರಸೆಲ್​ಗೆ ರಾಷ್ಟ್ರೀಯ ತಂಡಕ್ಕಿಂತ ದುಡ್ಡು ನೀಡುವ ಲೀಗ್​ ಹೆಚ್ಚಾಯ್ತಾ? - ಗ್ಲೋಬಲ್​ ಟಿ20 ಲೀಗ್​

ಗ್ಲೋಬಲ್​ ಟಿ-20 ಲೀಗ್​ನಲ್ಲಿ ಆಡುವ ಸಲುವಾಗಿ ಭಾರತದ ಎದುರಿನ ಟಿ-20 ಸರಣಿಯಿಂದ ಹಿಂದೆ ಸರಿದಿರುವುದಕ್ಕೆ ರಸೆಲ್​ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ.

Russell

By

Published : Aug 5, 2019, 7:33 PM IST

ಫ್ಲೋರಿಡಾ: ವಿಂಡೀಸ್​ ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ಆ್ಯಂಡ್ರೆ ರಸೆಲ್​ ಗಾಯದ ಕಾರಣ ನೀಡಿ ಭಾರತದೆದುರಿನ ಮೊದಲೆರಡು ಟಿ-20 ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ, ಅದೇ ದಿನ ನಡೆದಿದ್ದ ಗ್ಲೋಬಲ್​ ಟಿ-20 ಲೀಗ್​ನಲ್ಲಿ ಆಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ವಿಶ್ವಕಪ್​ ವೇಳೆ ಮಂಡಿ ನೋವಿಗೆ ತುತ್ತಾಗಿದ್ದ ರಸೆಲ್​ ಮಧ್ಯಂತರದಲ್ಲೇ ತಂಡದಿಂದ ಹೊರಬಿದ್ದಿದ್ದರು. ಇದೀಗ ಚೇತರಿಸಿಕೊಂಡಿರುವ ಅವರು ಭಾರತದ ವಿರುದ್ಧದ ಟಿ-20 ಸರಣಿಗೆ ತಾವಾಗಿಯೇ ಫಿಟ್​ ಇಲ್ಲ ಎಂಬ ಕಾರಣ ನೀಡಿ ಮೊದಲೆರಡು ಪಂದ್ಯಗಳಿಂದ ಹಿಂದೆ ಸರಿದಿದ್ದರು. ಆದರೆ, ಅದೇ ದಿನ ನಡೆದ ಗ್ಲೋಬಲ್​ ಟಿ20 ಲೀಗ್​ನಲ್ಲಿ ವಾಂಕೋವರ್​ ನೈಟ್ಸ್​ ತಂಡದ ಪರ ಆಡಿರುವುದು ವಿಂಡೀಸ್​ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.

ರಸೆಲ್​ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಇದೇ ಮೊದಲೇನಲ್ಲ. ಈ ಮೊದಲು ಐಪಿಎಲ್​ನಲ್ಲಿ ಆಡಲು ರಾಷ್ಟ್ರೀಯ ತಂಡದಿಂದ ಹೊರಬಂದಿದ್ದರು. ಇದೀಗ ಗ್ಲೋಬಲ್​ ಟಿ-20 ಲೀಗ್​ನಲ್ಲಿ ಆಡುವ ಸಲುವಾಗಿ ರಾಷ್ಟ್ರೀಯ ತಂಡದಿಂದ ಹೊರ ಬಂದಿರುವುದು ವಿಂಡೀಸ್​ ಕ್ರಿಕೆಟ್​ ಬೋರ್ಡ್​ಗೂ ಆಶ್ವರ್ಯ ತರಿಸಿದೆ.

ರಸೆಲ್​ ಭಾರತದ ಸರಣಿಯಿಂದ ಹಿಂದೆ ಸರಿದ ಹಿನ್ನೆಲೆ ಜಾಸನ್​ ಮೊಹಮ್ಮದ್​ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

ABOUT THE AUTHOR

...view details