ಕರ್ನಾಟಕ

karnataka

ETV Bharat / sports

ಗಾಯದ ಸಮಸ್ಯೆ ಬಂಗಾಳ ಕ್ರಿಕೆಟ್ ಶಿಬಿರದಿಂದ ಮನೋಜ್ ತಿವಾರಿ ಹೊರಕ್ಕೆ - ಮನೋಜ್ ತಿವಾರಿ

ಬ್ಯಾಟ್ಸ್‌ಮನ್ ಸಲಹೆಗಾರ ವಿ.ವಿ.ಎಸ್. ಲಕ್ಷ್ಮಣ್ ಮೇಲ್ವಿಚಾರಣೆಯಲ್ಲಿರುವ ಶಿಬಿರಕ್ಕೆ ಬಂಗಾಳ ತಂಡ ಗುರುವಾರ 32 ಆಟಗಾರರನ್ನು ಆಯ್ಕೆ ಮಾಡಿದೆ

Manoj Tiwary
ಮನೋಜ್ ತಿವಾರಿ

By

Published : Jan 29, 2021, 10:49 AM IST

ಕೋಲ್ಕತ್ತಾ: ಬಂಗಾಳದ ಹಿರಿಯ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು, ಇದರಿಂದಾಗಿ ಸಾಲ್ಟ್‌ಲೇಕ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ತಂಡದ ಶಿಬಿರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಂಗಾಳ ಕ್ರಿಕೆಟ್​ ಅಕಾಡೆಮಿ ತಿಳಿಸಿದೆ.

ಬ್ಯಾಟ್ಸ್‌ಮನ್ ಸಲಹೆಗಾರ ವಿ.ವಿ.ಎಸ್. ಲಕ್ಷ್ಮಣ್ ಮೇಲ್ವಿಚಾರಣೆಯಲ್ಲಿರುವ ಶಿಬಿರಕ್ಕೆ ಬಂಗಾಳ ತಂಡ ಗುರುವಾರ 32 ಆಟಗಾರರನ್ನು ಆಯ್ಕೆ ಮಾಡಿದೆ.

"ಮನೋಜ್ ಗಾಯಗೊಂಡಿದ್ದಾರೆ ಮತ್ತು ಇನ್ನು ಮುಂದೆ ಶಿಬಿರಕ್ಕೆ ಹಾಜರಾಗುವುದಿಲ್ಲ. ಅವರು ಅಭ್ಯಾಸವನ್ನು ಪ್ರಾರಂಭಿಸಿದ ಕೂಡಲೇ ಅವರು ತಂಡಕ್ಕೆ ಸೇರುತ್ತಾರೆ" ಎಂದು ಜಂಟಿ ಕಾರ್ಯದರ್ಶಿ ದೇಬಾಬ್ರತಾ ದಾಸ್ ಹೇಳಿದ್ದಾರೆ.

ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಮನೋಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು​ "ಗಾಯ ಹೆಚ್ಚಾಗಿದೆ, ನನಗೆ ವಿಶ್ರಾಂತಿ ನೀಡಲು ಸೂಚಿಸಲಾಗಿದೆ ಮತ್ತು ನಾನು ಪರಿಪೂರ್ಣಗೊಂಡ ತಕ್ಷಣ ತಂಡಕ್ಕೆ ಸೇರುತ್ತೇನೆ" ಎಂದು ಮಾಹಿತಿ ನೀಡಿದ್ದಾರೆ.

ಓದಿ : ನಾವು ಜನರಿಗೆ ಕ್ರೀಡೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು: ರೋರಿ ಬರ್ನ್ಸ್

ABOUT THE AUTHOR

...view details