ಕರ್ನಾಟಕ

karnataka

ETV Bharat / sports

ಕೊಹ್ಲಿ ಪಡೆ ಮೇಲೆ ಆಂಗ್ಲರ ಸವಾರಿ... ಮೊದಲ ಟಿ-20 ಗೆದ್ದು ಬೀಗಿದ ಇಂಗ್ಲೆಂಡ್​! - INDvsENG 1st T20

ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಮಿಂಚು ಹರಿಸಿದ ಇಂಗ್ಲೆಂಡ್ ತಂಡ ಮೊದಲ ಟಿ-20 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಸರಣಿಯಲ್ಲಿ ಶುಭಾರಂಭ ಮಾಡಿದೆ.

INDvsENG 1st T20
INDvsENG 1st T20

By

Published : Mar 12, 2021, 10:39 PM IST

Updated : Mar 12, 2021, 10:46 PM IST

ಅಹಮದಾಬಾದ್​:ಬ್ಯಾಟಿಂಗ್ ಹಾಗೂ ಬೌಲಿಂಗ್​ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ಮೊದಲ ಟಿ-20 ಪಂದ್ಯದಲ್ಲಿ ಸೋಲು ಕಂಡಿದ್ದು, ಇಂಗ್ಲೆಂಡ್​ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಆಂಗ್ಲರ ತಂಡ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ವಿಕೆಟ್​ ಕಿತ್ತ ಸಂಭ್ರಮದಲ್ಲಿ ಇಂಗ್ಲೆಂಡ್​ ತಂಡ

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಟೀಂ ಇಂಡಿಯಾ ಪ್ಲೇಯರ್ಸ್​​ ಆಂಗ್ಲರ ಬೌಲಿಂಗ್​ ದಾಳಿಗೆ ತತ್ತರಿಸಿ ಹೋದರು. ರೋಹಿತ್​ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್​ ಆರಂಭಿಸಿದ ಶಿಖರ್​ ಧವನ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ವಿರಾಟ್​ ವಿಕೆಟ್ ಕಿತ್ತ ಆರ್ಚರ್​​

ಆರಂಭಿಕರಾಗಿ ಕಣಕ್ಕಿಳಿದ ಶಿಖರ್​ ಧವನ್​​(4), ಕೆ.ಎಲ್​.ರಾಹುಲ್​​ (1) ಹಾಗೂ ವಿರಾಟ್​ ಕೊಹ್ಲಿ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು. 5 ಓವರ್​ ಮುಕ್ತಾಯಗೊಳ್ಳುವಷ್ಟರಲ್ಲಿ ಟೀಂ ಇಂಡಿಯಾ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ರಿಷಭ್​ ಪಂತ್​ ಹಾಗೂ ಶ್ರೇಯಸ್ ಐಯ್ಯರ್​ ತಂಡಕ್ಕೆ ಆಸರೆಯಾದರು. ರಿಷತ್​ ಪಂತ್​(21), ಹಾರ್ದಿಕ್ ಪಾಂಡ್ಯ ಕೂಡ 19 ರನ್ ​ಗಳಿಸಿ ಔಟಾದರು. ಶ್ರೇಯಸ್​ ಐಯ್ಯರ್​ 67 ರನ್ ​ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯದಾಗಿ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 124 ರನ್ ​ಗಳಿಸಲಷ್ಟೇ ಶಕ್ತವಾಯಿತು.

ಶ್ರೇಯಸ್ ಅಯ್ಯರ್​ ಬ್ಯಾಟಿಂಗ್ ವೈಖರಿ

ಇಂಗ್ಲೆಂಡ್​ ಪರ ಬೌಲಿಂಗ್​ನಲ್ಲಿ ಮಿಂಚಿದ ಜೋಪ್ರಾ ಆರ್ಚರ್​​ 3 ವಿಕೆಟ್ ಪಡೆದುಕೊಂಡರೆ, ಬೆನ್​ ಸ್ಟೋಕ್ಸ್​, ಆದಿಲ್ ರಶೀದ್​, ಮಾರ್ಕ್​ ವುಡ್ ಹಾಗೂ ಜೋರ್ಡನ್​​ ತಲಾ 1 ವಿಕೆಟ್​ ಪಡೆದುಕೊಂಡರು.

ಇದನ್ನೂ ಓದಿ: ಬ್ಯಾಟಿಂಗ್​ ವೈಫಲ್ಯದ ನಡುವೆ ಅಬ್ಬರಿಸಿದ ಶ್ರೇಯಸ್: ಇಂಗ್ಲೆಂಡ್​ ಗೆಲುವಿಗೆ 125 ರನ್​ ಟಾರ್ಗೆಟ್

125 ರನ್​ ಗೆಲುವಿನ ಗುರಿ ಬೆನ್ನತ್ತಿದ್ದ ಆಂಗ್ಲರ ಪಡೆ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ಜೇಸನ್​ ರಾಯ್​ ಹಾಗೂ ಜೋಸ್ ಬಟ್ಲರ್​ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ ವಿಕೆಟ್​ಗೆ 72 ರನ್​ಗಳ ಜೊತೆಯಾಟ ಆಡಿದ ಜೋಡಿ ತಂಡವನ್ನ ಗೆಲುವಿನತ್ತ ತೆಗೆದುಕೊಂಡು ಹೋಯಿತು.

ಜೇಸನ್​ ರಾಯ್​ 49 ರನ್​, ಬಟ್ಲರ್​​ 28 ರನ್​ ಗಳಿಕೆ ಮಾಡಿ ವಿಕೆಟ್​ ಒಪ್ಪಿಸುತ್ತಿದ್ದಂತೆ ನಂತರ ಬಂದ ಡೇವಿಡ್ ಮಲಾನ್ ಅಜೇಯ 24 ರನ್​ ಹಾಗೂ ಬೈರ್​ಸ್ಟೋ ಅಜೇಯ 26 ರನ್​ ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ ತಂಡ 15.3 ಓವರ್​ಗಳಲ್ಲಿ 2 ವಿಕೆಟ್ ​ನಷ್ಟಕ್ಕೆ 130 ರನ್​ಗಳಿಸಿ ಜಯ ಸಾಧಿಸಿತು.

ಟೀಂ ಇಂಡಿಯಾ ಪರ ಯಜುವೇಂದ್ರ ಚಹಾಲ್​ ಹಾಗೂ ವಾಷಿಂಗ್ಟನ್ ಸುಂದರ್​ ತಲಾ 1 ವಿಕೆಟ್ ಪಡೆದುಕೊಂಡರು.

Last Updated : Mar 12, 2021, 10:46 PM IST

ABOUT THE AUTHOR

...view details