ಕರ್ನಾಟಕ

karnataka

ETV Bharat / sports

ಶ್ರೀಲಂಕಾ ವಿರುದ್ಧ ಶಿಖರ್​ ಧವನ್​ ಜೊತೆ ಕನ್ನಡಿಗ ರಾಹುಲ್​ ಓಪನರ್​​... ಖಚಿತ ಪಡಿಸಿದ ಕೊಹ್ಲಿ - ಶ್ರೀಲಂಕಾ ವಿರುದ್ಧ ಶಿಖರ್​ ಧವನ್​ ಜೊತೆ ಕನ್ನಡಿಗ ರಾಹುಲ್​ ಓಪನರ್

ಗಾಯದಿಂದ ಚೇತರಿಸಿಕೊಂಡಿರುವ ಶಿಖರ್​ ಧವನ್​ ಜೊತೆ ಕೆಎಲ್​ ರಾಹುಲ್​ ಶ್ರೀಲಂಕಾ ವಿರುದ್ಧದ ಟಿ-20 ಪಂದ್ಯದಲ್ಲಿ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

Indis vs Sri Lanka
Indis vs Sri Lanka

By

Published : Jan 4, 2020, 7:13 PM IST

ಗುವಾಹಟಿ:ಗಾಯದಿಂದ ಚೇತರಿಸಿಕೊಂಡಿರುವ ಶಿಖರ್​ ಧವನ್​ ಜೊತೆ ಕೆಎಲ್​ ರಾಹುಲ್​ ಶ್ರೀಲಂಕಾ ವಿರುದ್ಧದ ಟಿ-20 ಪಂದ್ಯದಲ್ಲಿ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂದು ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೊಹ್ಲಿ ಖಚಿತಪಡಿಸಿದ್ದಾರೆ.

"ರಾಹುಲ್​ ತನಗೆ ಸಿಕ್ಕ ಅವಕಾಶಗಳನ್ನು ತುಂಬಾ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಯಾವುದೇ ಒಬ್ಬ ಆಟಗಾರ ಗಾಯಕ್ಕೊಳಗಾದರೆ, ಸಿಗುವ ಅವಕಾಶಗಳನ್ನು ಮತ್ತೊಬ್ಬ ಎರಡೂ ಕೈಗಳಿಂದ ಬಾಚಿಕೊಳ್ಳುವುದು ಕ್ರೀಡೆಗಳಲ್ಲಿ ಸಾಮಾನ್ಯ. ರಾಹುಲ್​ ಕೂಡ ತಮ್ಮ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮವಾಗಿ ಆಡುತ್ತಿದ್ದಾರೆ. ಅವರು ಚೆಂಡನ್ನು ದಂಡಿಸುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ" ಎಂದು ಕೊಹ್ಲಿ ತಿಳಿಸಿದ್ದಾರೆ.

ಆದರೆ, ತಂಡದಲ್ಲಿ 15 ಮಂದಿ ಆಟಗಾರರು ಎಲ್ಲ ಪಂದ್ಯಗಳಲ್ಲೂ ಆಡುವುದಕ್ಕಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ರೋಹಿತ್​ ಅನುಪಸ್ಥಿತಿಯಲ್ಲಿ ರಾಹುಲ್​ -ಶಿಖರ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಆದರೆ ರೋಹಿತ್ ತಂಡಕ್ಕೆ​ ವಾಪಸ್​ ಬಂದರೆ ಯಾರನ್ನು ಆಯ್ಕೆ ಮಾಡಬೇಕು ಎಂಬುದೇ ನಮಗೆ ಕಷ್ಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ರೋಹಿತ್​ ಶರ್ಮಾರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿಂಡೀಸ್​ ವಿರುದ್ಧ ಸರಣಿ ತಪ್ಪಿಸಿಕೊಂಡಿದ್ದ ಧವನ್​ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಲು ಮತ್ತೊಂದು ಅವಕಾಶ ಸಿಕ್ಕಿದೆ.

ಇನ್ನು ಟಿ-20 ವಿಶ್ವಕಪ್​ ಬಗ್ಗೆ ಮಾತನಾಡಿದ ಕೊಹ್ಲಿ , ಟಿ20 ಕ್ರಿಕೆಟ್​ನಲ್ಲಿ ಆಟಗಾರರನ್ನು ಆಯ್ಕೆ ಮಾಡಲು ನಮಗೆ ಯಾವುದೇ ಸಮಸ್ಯೆಯಿಲ್ಲ. ಯಾಕಂದ್ರೆ ವಿಶ್ವಕಪ್​ಗೂ ಮುನ್ನ ಐಪಿಎಲ್​ ಬರುವುದರಿಂದ ಯಾವ ಆಟಗಾರರು, ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ತಿಳಿಯುತ್ತದೆ. ಅಲ್ಲದೆ, ಆಟಗಾರರು ಯಾವ ರೀತಿ ಫಿಟ್​ ಇರುತ್ತಾರೆ ಎಂಬುದರ ಮೇಲೆ ತಂಡದ ಆಯ್ಕೆ ನಿಂತಿದೆ. ಈ ದೃಷ್ಠಿಯಿಂದ ಮುಂದಿನ ನಾಲ್ಕೈದು ಸರಣಿಗಳು ನಮಗೆ ಮುಖ್ಯವಾಗಿದೆ. ಅಲ್ಲಿ ಆಟಗಾರರು ಯಾವ ರೀತಿ ಒತ್ತಡ ನಿಭಾಯಿಸಲಿದ್ದಾರೆ ಎಂಬುದು ತಿಳಿಯಲಿದೆ. ಅಲ್ಲದೆ ಐಸಿಸಿ ಟೂರ್ನಮೆಂಟ್​ಗಳನ್ನು ಕೇವಲ 2-3 ಆಟಗಾರರಿಂದ ಗೆಲ್ಲಲು ಸಾಧ್ಯವಿಲ್ಲ, ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಜನವರಿ 5 ರಿಂದ ಶ್ರೀಲಂಕಾ ವಿರುದ್ಧ ಟಿ-20 ಸರಣಿ ನಡೆಯಲಿದೆ.

ABOUT THE AUTHOR

...view details