ಕರ್ನಾಟಕ

karnataka

ETV Bharat / sports

ಕಡಿಮೆಯಾದ ವರುಣನ ಅಬ್ಬರ: ಭಾರತದೆದುರು ಈ ಟಾರ್ಗೆಟ್​ ಸಾಧ್ಯತೆ! - ಮ್ಯಾಂಚೆಸ್ಟರ್​

ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಇಂದು ಭಾರತ-ನ್ಯೂಜಿಲ್ಯಾಂಡ್​ ತಂಡ ಮುಖಾಮುಖಿಯಾಗಿದ್ದು, ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದಾನೆ.

ಸೆಮಿಫೈನಲ್​ ಪಂದ್ಯ

By

Published : Jul 9, 2019, 10:34 PM IST

ಮ್ಯಾಂಚೆಸ್ಟರ್​: ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದು, ಮಳೆ ಇದೀಗ ಕಡಿಮೆಯಾಗಿದೆ.

ಇದೀಗ ಮೈದಾನದಲ್ಲಿರುವ ನೀರು ಹೊರಹಾಕುವ ಕಾರ್ಯದಲ್ಲಿ ಸಿಬ್ಬಂದಿ ಬ್ಯುಸಿಯಾಗಿದ್ದು, ಎಲ್ಲ ಕೆಲಸ ಸಂಪೂರ್ಣವಾಗಿ ಮುಕ್ತಾಯಗೊಂಡು, ಮೈದಾನ ಕ್ರಿಕೆಟ್​​ ಆಡಲು ಸಜ್ಜುಗೊಂಡರೆ ಟೀಂ ಇಂಡಿಯಾ ತಂಡಕ್ಕೆ ಈ ಕೆಳಗಿನ ಟಾರ್ಗೆಟ್​ ನೀಡಬಹುದು ಎನ್ನಲಾಗಿದೆ.

ಕಿವೀಸ್​ ತಂಡ 46.1 ಓವರ್​ಗಳಲ್ಲಿ 211ರನ್​ಗಳಿಕೆ ಮಾಡಿದ್ದು, ಇದೀಗ ಭಾರತಕ್ಕೆ ಈ ಕೆಳಗಿನ ಟಾರ್ಗೆಟ್​ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  • 46 ಓವರ್​ಗಳಲ್ಲಿ 237ರನ್​
  • 40 ಓವರ್​ಗಳಲ್ಲಿ 223ರನ್​
  • 35 ಓವರ್​ಗಳಲ್ಲಿ 209ರನ್​
  • 30 ಓವರ್​ಗಳಲ್ಲಿ 192ರನ್​
  • 25 ಓವರ್​ಗಳಲ್ಲಿ 172ರನ್​
  • 20 ಓವರ್​ಗಳಲ್ಲಿ 148ರನ್ ಟಾರ್ಗೆಟ್​

9 ಗಂಟೆಯಿಂದ ಮಳೆ ನಿರಂತರವಾಗಿ ಸುರಿದ ಕಾರಣ ಪ್ರತಿ 4 ನಿಮಿಷಕ್ಕೆ ಒಂದು ಓವರ್​ ಕಡಿತ ಮಾಡಿ ಟೀಂ ಇಂಡಿಯಾಗೆ ಟಾರ್ಗೆಟ್​​ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details