ನವದೆಹಲಿ: ಭಾರತ ಟೆಸ್ಟ್ ತಂಡದ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ, ಆಲ್ರೌಂಡರ್ ಹನುಮ ವಿಹಾರಿ ಹಾಗೂ ಸಹಾಯಕ ಸಿಬ್ಬಂದಿ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ದುಬೈಗೆ ಬಂದಿಳಿದಿದ್ದಾರೆ.
ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಮಾತ್ರ ಸೋಮವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಪೂಜಾರ, ವಿಹಾರಿಯನ್ನು ಹೊರತುಪಡಿಸಿ, ಬ್ಯಾಟಿಂಗ್ ಕೋಚ್ ವಿಕ್ರಮ್ ಕುಮಾರ್, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಕೂಡ ದುಬೈಗೆ ಪ್ರಯಾಣ ಬೆಳೆಸಿದ್ದಾರೆಂದು ತಿಳಿದುಬಂದಿದೆ.
ಯುಎಇಗೆ ಬಂದ ಕೂಡಲೇ ಐಪಿಎಲ್ಗಾಗಿ ಬಿಸಿಸಿಐ ಜಾರಿಗೆ ತಂದಿರುವ ನಿಯಮಗಳ ಪ್ರಕಾರ, 6 ದಿನಗಳ ಕಾಲ ಕ್ವಾರಂಟೈನ್ ಹಾಗೂ ಕೋವಿಡ್ ಟೆಸ್ಟ್ಗಳಿಗೆ ಒಳಗಾಗಬೇಕಿದೆ. ಆದರೆ ಈ ಗುಂಪು ಐಪಿಎಲ್ನ ಬಯೋಬಬಲ್ ಭಾಗವಾಗುವುದಿಲ್ಲ. ಇವರು ಬೇರೆ ಹೋಟೆಲ್ನಲ್ಲಿ ಇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಡ್ನಿ ಹಾಗೂ ಕ್ಯಾನ್ಬೆರಾದಲ್ಲಿ ವೈಟ್ಬಾಲ್ ಸರಣಿ ಆಯೋಜನೆಯಾಗಲಿದೆ. ಕ್ವಾರಂಟೈನ್ ವೇಳೆಯಲ್ಲೂ ತರಬೇತಿ ನಡೆಸಲು ನ್ಯೂಸ್ಸೌತ್ವೇಲ್ಸ್ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.
ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಪಡೆ 3 ಟಿ20 , 3 ಏಕದಿನ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಪ್ರವಾಸಕ್ಕೆ ಭಾರತ ತಂಡವನ್ನು ಮುಂದಿನ ವಾರ ಘೋಷಣೆ ಮಾಡುವ ಸಾಧ್ಯತೆಯಿದೆ.