ಹೈದರಾಬಾದ್: ಅರ್ಜುನ ಹಾಗು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ಯುವ ಮಹಿಳಾ ಶೂಟರ್ ಮನು ಭಾಕರ್ ಟೋಕಿಯೋ ಒಲಿಂಪಿಕ್ಸ್ ಮುಂದೂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ನಿರೀಕ್ಷೆ ಮೂಡಿಸಿದ್ದ ಈ ಕ್ರೀಡಾಪಟು, ಈಟಿವಿ ಭಾರತದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡರು.
2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳಾ ವಿಭಾಗದ 10 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದ ಇವರು ಕೊರೊನಾ ಲಾಕ್ಡೌನ್ನಲ್ಲಿ ಸಿಲುಕಿ ಸದ್ಯ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಮನು ಭಾಕರ್ ಜೊತೆಗೆ ಈಟಿವಿ ಭಾರತ ಸಂದರ್ಶನ ಲಾಕ್ಡೌನ್ ಕುರಿತು ಮಾತನಾಡಿರುವ ಅವರು, 'ನಾನು ನನ್ನ ದಿನಚರಿಯ ಬಗ್ಗೆ ನಾನು ಸಾಕಷ್ಟು ಕಟ್ಟುನಿಟ್ಟಾಗಿರುತ್ತೇನೆ. ಅದು ಶೂಟಿಂಗ್ ತರಬೇತಿಯಾಗಿರಬಹುದು ಅಥವಾ ವಿದ್ಯಾಬ್ಯಾಸವೇ ಆಗಿರಬಹುದು. ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಅಡುಗೆ ಮಾಡುವುದನ್ನು ಕಲಿತ್ತಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಭಾಕರ್, 'ನನಗೆ ಅಡುಗೆ ಮಾಡಲು ಇಷ್ಟವಿಲ್ಲ. ಕೆಲವೊಮ್ಮೆ ಸ್ವಲ್ಪ ಕಾಲ ಅಡುಗೆ ಮನೆಯಲ್ಲಿ ಕಾಲ ಕಳೆಯುತ್ತೇನೆ' ಎಂದಿದ್ದಾರೆ.
ಇನ್ನು ಪೋಷಕರ ಬಗ್ಗೆ ಮಾತನಾಡುತ್ತಾ, ನಾನು 3ನೇ ತರಗತಿಯಿಂದಲೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದೇನೆ. ಆದರೆ ನಮ್ಮ ಪೋಷಕರು ಎಂದೂ ನನ್ನ ಕ್ರೀಡಾಸಕ್ತಿಯನ್ನು ನಿಲ್ಲಿಸಲು ಪ್ರಯತ್ನಿಸಲಿಲ್ಲ. ಅವರು ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ. ಹಾಗೂ ನಾನು ಅವರಂತಹ ಪೋಷಕರನ್ನು ಪಡೆದಿರುವುದಕ್ಕೆ ಅದೃಷ್ಟವಂತೆ ಎಂದು ಹೇಳಿಕೊಂಡಿದ್ದಾರೆ.