ಕರ್ನಾಟಕ

karnataka

ETV Bharat / sports

ನನ್ನಮ್ಮನೇ ನನಗೆ ಸ್ಪೂರ್ತಿ, ಕುಟುಂಬವೇ ನನ್ನ ಯಶಸ್ಸಿಗೆ ಪ್ರೇರಣೆ: ಜಸ್ಪ್ರೀತ್​ ಬುಮ್ರಾ

ತಮ್ಮ ವೃತ್ತಿ ಜೀವನದ ಯಶಸ್ವಿಗೆ ತಮ್ಮ ಕುಟುಂಬವೇ ಕಾರಣ ಎಂದಿರುವ ಬುಮ್ರಾ ಚಿಕ್ಕವಯಸ್ಸಿನಲ್ಲೇ ತಮ್ಮ ತಂದೆಯನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ತಮ್ಮ ಬದುಕಿನ ಹೆಚ್ಚಿನ ದಿನಗಳನ್ನು ಅಮ್ಮ ಹಾಗೂ ಅಕ್ಕನೊಂದಿಗೆ ಕಳೆದಿರುವ ಯಾರ್ಕರ್​ ಸ್ಪೆಷಲಿಸ್ಟ್​, ಅಮ್ಮನೇ ನನಗೆ ಸ್ಪೂರ್ತಿ ಎಂದು ಐಸಿಸಿ ನಡೆಸಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

bum

By

Published : Jun 22, 2019, 7:41 PM IST

ಲಂಡನ್​: ವಿಶ್ವಕ್ರಿಕೆಟ್​ನಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಬೌಲಿಂಗ್​ ಮಾಡುವ ಭಾರತದ ಕೆಚ್ಚೆದೆಯ ಬೌಲರ್ ಜಸ್ಪ್ರೀತ್ ಬುಮ್ರಾ, ತಮ್ಮ ರೋಲ್​ ಮಾಡೆಲ್​ ಯಾರು ಎಂಬುದನ್ನು ತಿಳಿಸಿದ್ದಾರೆ.

ತಮ್ಮ ವೃತ್ತಿ ಜೀವನದ ಯಶಸ್ಸಿಗೆ ತಮ್ಮ ಕುಟುಂಬವೇ ಕಾರಣ ಎಂದಿರುವ ಅವರು, ಚಿಕ್ಕವಯಸ್ಸಿನಲ್ಲೇ ತಂದೆಯನ್ನ ಕಳೆದು ಕೊಂಡಿದ್ದಾರೆ. ಹೀಗಾಗಿ ತಮ್ಮ ಬದುಕಿನ ಹೆಚ್ಚಿನ ದಿನಗಳನ್ನು ಅಕ್ಕ ಹಾಗೂ ಅಮ್ಮನೊಂದಿಗೆ ಕಳೆದಿರುವ ಯಾರ್ಕರ್​ ಸ್ಪೆಷಲಿಸ್ಟ್​ ತಮಗೆ ಸ್ಪೂರ್ತಿ ತಮ್ಮ ಅಮ್ಮನೇ ಎಂದು ಐಸಿಸಿ ನಡೆಸಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸ್ಕೂಲ್​ ಪ್ರಿನ್ಸಿಪಾಲ್​ ಆಗಿದ್ದ ನಮ್ಮ ತಾಯಿ ನಾನೊಬ್ಬ ಕ್ರಿಕೆಟಿಗನಾಗಲು ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ನನ್ನ ಮತ್ತು ಅಕ್ಕನ ಏಳಿಗೆಗಾಗಿ ಅವರು ತುಂಬಾ ಕಷ್ಟಪಟ್ಟಿದ್ದಾರೆ. ನಮ್ಮಮ್ಮನೇ ನನಗೆ ಸ್ಪೂರ್ತಿ, ನನಗೆ ಪ್ರೇರಣೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ವಿಶ್ವಕಪ್​ನಲ್ಲಿ ತಮ್ಮ ಪ್ರದರ್ಶನದ ಕುರಿತು ಮಾತನಾಡಿರುವ ಬುಮ್ರಾ, ಈ​ ಅಭಿಯಾನದ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿರುವ ಕುರಿತು ಮಾತನಾಡಿದ್ದು, ಇಂಥ ಮಹತ್ವದ ಟೂರ್ನಮೆಂಟ್​ಗಳಲ್ಲಿ ಉತ್ತಮ ಆರಂಭ ತೋರುವುದು ಎಲ್ಲಾ ತಂಡಗಳ ಬಯಕೆಯಾಗಿದೆ. ಅದ್ರಲ್ಲೂ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಎದುರಿಸುವಾಗ ವಿಕೆಟ್​ ಪಡೆಯುವುದು ಪ್ರಮುಖವಾಗಿರುತ್ತದೆ. ಆದ್ದರಿಂದ ಉತ್ತಮ ಏರಿಯಾಗಳಲ್ಲಿ ಬೌಲಿಂಗ್​ ಮಾಡುವುದರ ಜೊತೆಗೆ ಲೈನ್​ ಅಂಡ್​ ಲೆಂತ್​ನಲ್ಲಿ ಸ್ಥಿರತೆ ಕಾಪಾಡಿಕೊಳ್ಳಬೇಕು. ಇದು ಯಶಸ್ವಿಯಾದ್ದರಿಂದಲೇ ಬಲಿಷ್ಠ ತಂಡಗಳೆದುರು ಬಹುಬೇಗ ವಿಕೆಟ್​ ಪಡೆದೆವು ಎಂದಿದ್ದಾರೆ.

ವಿಶ್ವದ ಕಠಿಣ ಬೌಲರ್​ ಬುಮ್ರಾ ಎಂದ ಕ್ರಿಸ್‌ ಗೇಲ್​, ಆ್ಯಂಡ್ರೂ ರಸೆಲ್

ಇದೇ ವಿಡಿಯೋದಲ್ಲಿ ಮಾತನಾಡಿರುವ ಕ್ರಿಸ್​ಗೇಲ್​, ಬುಮ್ರಾರ ಎಸೆತಗಳು ಎಂತಹ ಬ್ಯಾಟ್ಸ್​ಮನ್​ಗಳನ್ನು ಮೋಸಗೊಳಿಸುತ್ತವೆ. ಉತ್ತಮ ಯಾರ್ಕರ್​, ರಿವರ್ಸ್ವಿಂಗ್ ಹಾಗೂ ವೇಗ ಬುಮ್ರಾರ ಬೌಲಿಂಗ್​ನಲ್ಲಿದೆ. ಅವರು ಇತರೆ ಎಲ್ಲಾ ವೇಗಿಗಳಿಗಿಂತ ಭಿನ್ನ ಎಂದು ಹೊಗಳಿದ್ದಾರೆ.

ಐಪಿಎಲ್​ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಬೌಲರ್​ಗಳ ನಿದ್ದೆಗೆಡಿಸಿದ್ದ ವಿಂಡೀಸ್​ ಆಲ್ರೌಂಡರ್​ ಆ್ಯಂಡ್ರ್ಯೂ ರಸೆಲ್​ ಕೂಡ ಬುಮ್ರಾ ತಾವೆದುರಿಸಿದ ಅತ್ಯಂತ ಕಠಿಣ ಬೌಲರ್, ಅವರು ಉತ್ತಮ ಯಾರ್ಕರ್​ ಹಾಗೂ ಉತ್ತಮ ವೇಗವನ್ನು ಕಾಯ್ದುಕೊಳ್ಳುತ್ತಾರೆ ​ಎಂದು ತಿಳಿಸಿದ್ದಾರೆ.

ABOUT THE AUTHOR

...view details