ಮ್ಯಾಂಚೆಸ್ಟರ್:ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ಗಳಾದ ರೋಹಿತ್,ಕೊಹ್ಲಿ,ರಾಹುಲ್ ಕೇವಲ 1ರನ್ಗಳಿಕೆ ಔಟ್ ಆಗುವ ಮೂಲಕ ವಿಶ್ವಕ್ರಿಕೆಟ್ನಲ್ಲಿ ಕಳಪೆ ರೆಕಾರ್ಡ್ ಬರೆದಿದ್ದಾರೆ.
ಆರಂಭಿಕರಾದ ರೋಹಿತ್ ಶರ್ಮಾ(1),ವಿರಾಟ್ ಕೊಹ್ಲಿ(1) ಹಾಗೂ ಕೆಎಲ್ ರಾಹುಲ್(1)ರನ್ಗಳಿಕೆ ಮಾಡಿ ನಿರಾಸೆ ಮೂಡಿಸಿದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಈ ರೀತಿ ಹೀನಾಯವಾಗಿ ವಿಕೆಟ್ ಒಪ್ಪಿಸುವ ಮೂಲಕ ಯಾವ ದೇಶದ ಕ್ರಿಕೆಟ್ ಬ್ಯಾಟ್ಸ್ಮನ್ಗಳು ನಿರ್ಮಾಣ ಮಾಡದಂತಹ ರೆಕಾರ್ಡ್ ಬರೆದಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಿಕೆಟ್ ತಂಡದ ಆರಂಭಿಕ ಮೂವರು ಬ್ಯಾಟ್ಸ್ಮನ್ಗಳು 1,1,1ರನ್ಗಳಿಸಿ ವಿಕೆಟ್ ಒಪ್ಪಿಸಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ರೋಹಿತ್, ಕೊಹ್ಲಿ ಹಾಗೂ ರಾಹುಲ್ ಈ ರೀತಿ ವಿಕೆಟ್ ಒಪ್ಪಿಸಿದ್ದಾರೆ.
ಏಕದಿನ ವಿಶ್ವಕಪ್ವೊಂದರಲ್ಲೇ ದಾಖಲೆಯ ಐದು ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಮ್ಯಾಟ್ ಹೆನ್ರಿ ಓವರ್ನಲ್ಲಿ,ರನ್ ಮೆಶಿನ್ ಖ್ಯಾತಿಯ ನಾಯಕ ವಿರಾಟ್ ಕೊಹ್ಲಿ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ದಾಳಿಯಲ್ಲಿ ಹಾಗೂ ಕೆಎಲ್ ರಾಹುಲ್ ಕೂಡ ಹೆನ್ರಿ ಓವರ್ನಲ್ಲಿ ವಿಕೆಟ್ ಒಪ್ಪಿಸಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.