ಕರ್ನಾಟಕ

karnataka

ETV Bharat / sports

ನಿವೃತ್ತಿ ನಂತರ ಕೊಹ್ಲಿ ಇದನ್ನು ತಪ್ಪದೇ​ ಕಲಿಯಬೇಕು ಅನ್ಕೊಂಡಿದ್ದಾರಂತೆ...! - ವಿರಾಟ್​ ಕೊಹ್ಲಿ ಡಯಟ್​

ವಿರಾಟ್​ ಕೊಹ್ಲಿ ಚಿಕ್ಕವಯಸ್ಸಿನಲ್ಲಿ ಬಹಳ ಅಹಾರಪ್ರಿಯರಾಗಿದ್ದರಂತೆ. ಆದರೆ​ ಆಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಫಿಟ್​ನೆಸ್​ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುವುದರಿಂದ ಅಹಾರ ಪದ್ಧತಿಯನ್ನು ಅನುಸರಿಸಿದ್ದಾರೆ. ಇದರಿಂದ ಅವರಿಗಿಷ್ಟವಾದ ಅಹಾರವನ್ನು ಕಷ್ಟಪಟ್ಟು ದೂರವಿಟ್ಟಿದ್ದಾರೆ. ಆದರೆ ನಿವೃತ್ತಿ ನಂತರ ತಾವು ತಮಗಿಷ್ಟವಾದ ತಿನಿಸುಗಳನ್ನು ತಾವೇ ತಯಾರಿಸಿಕೊಂಡು ತಿನ್ನಲು ಬಯಸಿದ್ದಾರೆ.

Indian skipper Virat Kohli

By

Published : Nov 10, 2019, 7:47 PM IST

ನವದೆಹಲಿ: ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ತಾವೂ ಅಡುಗೆ ಮಾಡುವುದನ್ನು ಕಲಿಯಬೇಕು ಎಂದು ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

ಹೌದು, ಇದು ಆಶ್ಚರ್ಯವಾದರೂ ಇದು ಸತ್ಯ. ವಿರಾಟ್​ ಕೊಹ್ಲಿ ಚಿಕ್ಕವಯಸ್ಸಿನಲ್ಲಿ ಬಹಳ ಅಹಾರಪ್ರಿಯರಾಗಿದ್ದರಂತೆ. ಆದರೆ​ ಆಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಫಿಟ್​ನೆಸ್​ ಕಾಪಾಡಿಕೊಳ್ಳುವುದು ಮುಖ್ಯವಾಗಿರುವುದರಿಂದ ಅಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ಅವರಿಗಿಷ್ಟವಾದ ಅಹಾರವನ್ನು ಕಷ್ಟಪಟ್ಟು ದೂರವಿಟ್ಟಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ಕೊಹ್ಲಿ ನಿವೃತ್ತಿ ನಂತರ 22 ಅಡಿ ಪಿಚ್​ನಿಂದ ದೂರ ಉಳಿದು ತಮಗಿಷ್ಟವಾದ ತಿನಿಸುಗಳನ್ನು ತಿನ್ನುವುದು ಹಾಗೂ ತಯಾರಿಸುವುದನ್ನು ಕಲಿಯಲು ಪ್ರಯತ್ನಸಲಿದ್ದೇನೆ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಂಜಾಬ್​ ಮೂಲದ ಕೊಹ್ಲಿ ಕ್ರಿಕೆಟ್​ ಜಗತ್ತಿಗೆ ಕಾಲಿಟ್ಟ ನಂತರ ಫಿಟ್​ನೆಸ್​ ಕಾಪಾಡಿಕೊಳ್ಳಲು ಬಹಳ ಮಹತ್ವ ನೀಡಿದ್ದಾರೆ. ತಮಗೆ ಇಷ್ಟವಾದ ಮಾಂಸಾಹಾರವನ್ನು ಕೂಡ ತ್ಯಜಿಸಿದ ಕೊಹ್ಲಿ ಫಿಟ್​ನೆಸ್​ಗೆ ಅಗತ್ಯವಾದ ಅಹಾರವನ್ನು ಮಾತ್ರ ತಮ್ಮ ಡಯಟ್​ನಲ್ಲಿ ಅನುಸರಿಸುತ್ತಿದ್ದಾರೆ. ಆದ್ದರಿಂದಲೇ ಅವರು ಭಾರತ ತಂಡದಲ್ಲಿರುವ ಅತ್ಯಂತ ಫಿಟ್​ ಆಟಗಾರ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಸಿಸಿಐ ಖಡ್ಡಾಯಗೊಳಿಸಿರುವ ಯೋ ಯೋ ಟೆಸ್ಟ್​ನಲ್ಲೂ ಕೂಡ ಅತಿ ಹೆಚ್ಚು ಅಂಕ ಪಡೆದಿರುವ ಆಟಗಾರನಾಗಿದ್ದಾರೆ.

ಸದ್ಯ ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದು ತಮ್ಮ ಪತ್ನಿ ಜೊತೆ ಪ್ರವಾಸದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೇ ತಿಂಗಳು ಬಾಂಗ್ಲಾ ವಿರುದ್ಧ ನಡೆಯುವ ಟೆಸ್ಟ್​ ಸರಣಿಯ ವೇಳೆ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ.

ABOUT THE AUTHOR

...view details