ಹೈದರಾಬಾದ್ :ಅಭಿಮಾನಿಯೊಬ್ಬ ಮೆಲ್ಬೋರ್ನ್ ರೆಸ್ಟೋರೆಂಟ್ವೊಂದರಲ್ಲಿ ಟೀಂ ಇಂಡಿಯಾ ಆಟಗಾರರ ಬಿಲ್‌ನ ಪಾವತಿಸಿದ್ದೀಗ ಹಳೆಯ ವಿಷಯ. ಆದರೆ, ಭಾರತದ ಆಟಗಾರರು ಅಂದು ಬೀಫ್ ತಿಂದಿದ್ದಾರೆ ಎಂದು ವೈರಲ್ ಆಗಿರುವ ಬಿಲ್‌ನ ಫೋಟೋ ಕಂಡು ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೆಸ್ಟೋರೆಂಟ್ಗೆ ತೆರಳಿದ್ದ ಭಾರತದ ತಂಡದ ಉಪನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್‌ಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಈಗಾಗಲೇ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಐಸೋಲೇಶನ್ಗೆ (ಪ್ರತ್ಯೇಕವಾಗಿ) ಒಳಪಡಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.
ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಟಗಾರರು ಜೈವಿಕ ಸುರಕ್ಷಿತ ಬಯೋಬಬಲ್ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದು, ನೆಟ್ಟಿಗರು ಕ್ರಮಕ್ಕೆ ಒತ್ತಾಯಿಸಿದ್ದರು.
ಹೀಗಾಗಿ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾವು (ಸಿಎ) ಆಟಗಾರರಿಂದ ಪ್ರೋಟೋಕಾಲ್ ಉಲ್ಲಂಘನೆಯಾಗಿದೆಯೇ, ಇಲ್ಲವೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದು, ಈಗಾಗಲೇ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ.
ಆದರೆ, ಅಂದು ಟೀಂ ಇಂಡಿಯಾ ಆಟಗಾರರ ಬಿಲ್ ಪಾವತಿಸಿದ್ದೆ ಎಂದು ಟ್ವಿಟರ್ನಲ್ಲಿ ಹೇಳಿಕೊಂಡಿದ್ದ ಅಭಿಮಾನಿ, ಬಿಲ್‌ನ ಅರ್ಧ ಭಾಗವನ್ನು ಮುಚ್ಚಿಕೊಂಡು ಒಟ್ಟು ಮೊತ್ತವನ್ನಷ್ಟೇ ಕಾಣುವಂತೆ ಫೋಟೋ ತೆಗೆದು ಪೋಸ್ಟ್ ಮಾಡಿದ್ರು. ಆದರೆ, ಈಗ ಮತ್ತೊಂದು ಫೋಟೋ ವೈರಲ್ ಆಗಿದ್ದು, ಅದರಲ್ಲಿ ಫೋರ್ಕ್ ಮತ್ತು ಬೀಫ್ ಕೂಡ ಇದೆ.
ಸದ್ಯ ಈ ಫೋಟೋ ಕಂಡಿರುವ ಅಭಿಮಾನಿಗಳು ಬೀಫ್ ತಿಂದವರು ಯಾರು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಅಲ್ಲದೆ ಬಹುತೇಕ ಅಭಿಮಾನಿಗಳು ರೋಹಿತ್ ಶರ್ಮಾ ಅವರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕಾಣಿಸಿದ್ದ ಬಿಲ್ ಮತ್ತು ಈಗ ವೈರಲ್ ಆಗಿರುವ ಎರಡೂ ಬಿಲ್ಗಳು ಒಂದೇ ರೀತಿ ಕಂಡರೂ ಸತ್ಯಾಸತ್ಯತೆಗಳ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.