ಚೆನ್ನೈ:ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಫೆಬ್ರವರಿ 5 ರಿಂದ ಪ್ರಾರಂಭವಾಗಲಿದೆ. ಇದಕ್ಕೂ ಮೊದಲು ಭಾರತೀಯ ಕ್ರಿಕೆಟ್ ಆಟಗಾರರು ಕೋವಿಡ್ ಟೆಸ್ಟ್ಗೆ ಒಳಗಾದರು.
ಇಂಗ್ಲೆಂಡ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಯ ಮೊದಲು ಫೆಬ್ರವರಿ 2ರಿಂದ ಅಭ್ಯಾಸವನ್ನು ಪ್ರಾರಂಭಿಸಲಿರುವ ಟೀಮ್ ಇಂಡಿಯಾ ಇನ್ನೂ ಎರಡು ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಈಗ ಎಲ್ಲ ಆಟಗಾರರಿಗೆ ನಡೆಸಿರುವ ಆರ್‌ಟಿ ಪಿಸಿಆರ್ ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ.
ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಚೆನ್ನೈ ತಲುಪಿದ್ದು, ಎರಡೂ ತಂಡಗಳು ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಉಳಿದುಕೊಂಡಿವೆ.
ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧಿಕಾರಿಯೊಬ್ಬರು ಗೌಪ್ಯತೆಯ ಸ್ಥಿತಿಯ ಕುರಿತು ಮಾತನಾಡಿ, ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಐಪಿಎಲ್ ಬಯೋ ಬಬಲ್‌ನಂತೆಯೇ ಇದೆ. ನಮ್ಮ ಆಟಗಾರರು ಈಗಾಗಲೇ ಆರ್‌ಟಿ ಪಿಸಿಆರ್ ಪರೀಕ್ಷೆಗೊಳಪಟ್ಟಿದ್ದಾರೆ. ಇದಾದ ಬಳಿಕ ಮತ್ತೆರೆಡು ಕೋವಿಡ್ ಪರೀಕ್ಷೆಗೆ ಒಳಪಡಬೇಕಾಗಿದೆ. ಈಗ ಸದ್ಯ ಆಟಗಾರರೆಲ್ಲರೂ ತಮ್ಮ- ತಮ್ಮ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
ಆಟಗಾರರು ತಮ್ಮ ಕುಟುಂಬಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಏಕೆಂದರೆ ಅವರು ಐಸೋಲೇಷನ್ ಸಮಯದಲ್ಲಿ ಏಕಾಂತವಾಗಿ ಉಳಿಯಬೇಕಾಗಬಹುದು. ಹೀಗಾಗಿ ಕುಟುಂಬಗಳನ್ನು ಅವರ ಜೊತೆ ಇರಲು ಅವಕಾಶ ಮಾಡಿಕೊಡಲಾಗಿದೆ.
ಹೋಟಲ್ಗೆ ಉಪನಾಯಕ ಅಜಿಂಕ್ಯ ರಹಾನೆ, ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬಗಳೊಂದಿಗೆ ಆಗಮಿಸಿದ್ದಾರೆ.