ಸಿಡ್ನಿ:ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದ 3ನೇ ದಿನ ಭಾರತೀಯ ವೇಗದ ಬೌಲರ್‌ಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಎಸ್ಸಿಜಿಯಲ್ಲಿ ನೆರೆದಿರುವ ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಕುರಿತು ಐಸಿಸಿ ಮತ್ತು ಸ್ಟೇಡಿಯಂ ಅಧಿಕಾರಿಗಳು ಬುಮ್ರಾ, ಸಿರಾಜ್ ಮತ್ತು ಭಾರತ ತಂಡದ ನಿರ್ವಹಣೇ ಮಂಡಳಿಯ ಜೊತೆ 3ನೇ ದಿನದ ಪಂದ್ಯದಂತ್ಯಕ್ಕೆ ಸುದೀರ್ಘವಾದ ಈ ಕುರಿತು ಚರ್ಚೆ ಮಾಡಿದ್ದಾರೆ. ನಾಯಕ ರಹಾನೆ ಕೂಡ ಭದ್ರತಾ ಸಿಬ್ಬಂದಿಯೊಂದಿಗೆ ಈ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
" ಕಳೆದ ಎರಡು ದಿನಗಳಿಂದ ಭಾರತೀಯ ಜೋಡಿ(ಬುಮ್ರಾ-ಸಿರಾಜ್)ಯನ್ನು ಪಂದ್ಯ ವೀಕ್ಷಣೆಗೆ ಬಂದಿರುವ ಸಾರ್ವಜನಿಕರು ಜನಾಂಗೀಯವಾಗಿ ನಿಂದಿಸುತ್ತಿದ್ದಾರೆ ಎಂದು ಬಿಸಿಸಿಐ ಆಧಿಕಾರಿಗಳುತ ಆರೋಪಿಸಿದ್ದಾರೆಂದು" ಆಸ್ಟ್ರೇಲಿಯನ್ ಪತ್ರಿಕೆ ' ದ ಡೈಲಿ ಟೆಲಿಗ್ರಾಫ್ ' ವರದಿ ಮಾಡಿದೆ.