ಕರ್ನಾಟಕ

karnataka

ETV Bharat / sports

ಇಂಡೋ-ಪಾಕ್​ ಪಂದ್ಯದ ವೇಳೆ ಲವ್ ಪ್ರಪೋಸಲ್​... 'ಹೌ ಈಸ್‌ ದಿ ಜೋಶ್‌ ಎಂದ ಲವರ್ಸ್​​! - ಟೀಂ ಇಂಡಿಯಾ

ಭಾರತ-ಪಾಕಿಸ್ತಾನ ತಂಡಗಳ ನಡುವೆ ಮೈದಾನದಲ್ಲಿ ಗೆಲುವಿಗಾಗಿ ಹೋರಾಟ ನಡೆಯುತ್ತಿದ್ದಾಗ ಗ್ಯಾಲರಿಯಲ್ಲಿ ವಿಶಿಷ್ಟ ಘಟನೆವೊಂದು ನಡೆದಿದೆ.

ಲವರ್ಸ್​ಗಳ ಲವ್​ ಪ್ರಪೋಸಲ್​

By

Published : Jun 22, 2019, 2:44 AM IST

ಮ್ಯಾಂಚೆಸ್ಟರ್​​​​:ಕಳೆದ ಭಾನುವಾರ ಲಂಡನ್​​ನ ಮ್ಯಾಂಚೆಸ್ಟರ್​​ನಲ್ಲಿ ಇಂಡೋ-ಪಾಕ್​ ಮಧ್ಯೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಪಂದ್ಯ ನಡೆಯುತ್ತಿದ್ದಾಗ ವಿಶಿಷ್ಟವಾದ ಘಟನೆವೊಂದು ನಡೆದಿದ್ದು, ಅದು ಇದೀಗ ವೈರಲ್​ ಆಗುತ್ತಿದೆ.

ಹೈವೋಲ್ಟೇಜ್​​ ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಪ್ರೇಮಿಗಳಿಬ್ಬರ ನಡುವೆ ವಿಶಿಷ್ಟವಾದ ಘಟನೆವೊಂದು ನಡೆದಿದೆ. ಟೀಂ ಇಂಡಿಯಾ ಕ್ರಿಕೆಟ್​​ನ ಕ್ರೀಡಾಭಿಮಾನಿವೋರ್ವ ಪಂದ್ಯ ವೀಕ್ಷಣೆ ಮಾಡುತ್ತಿದ್ದಾಗ ಗ್ಯಾಲರಿಯಲ್ಲೇ ಕುಳಿತುಕೊಂಡಿದ್ದ ತನ್ನ ಪ್ರೇಯಸಿಗೆ ಲವ್​ ಪ್ರಪೋಸ್ ಮಾಡಿದ್ದಾನೆ. ಅದರ ವಿಡಿಯೋ ಇದೀಗ ವೈರಲ್​ ಆಗಿದೆ.

ಇಂಡೋ-ಪಾಕ್​ ಪಂದ್ಯದ ವೇಳೆ ಲವ್ ಪ್ರಪೋಸಲ್

ಪಂದ್ಯ ನಡೆಯುತ್ತಿದ್ದ ವೇಳೆ ಪ್ರೇಯಸಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿರುವ ಈ ವ್ಯಕ್ತಿ, ಆಕೆಯ ಬೆರಳಿಗೆ ಉಗುರು ಹಾಕಿದ್ದಾನೆ. ಈ ವೇಳೆ ಆತನ ಗೆಳತಿ ಸಂತೋಷದಿಂದ ಆತನನ್ನು ತಬ್ಬಿಕೊಂಡು, ಸಂಭ್ರಮಿಸಿದ್ದಾಳೆ. ಜತೆಗೆ ತನ್ನ ಗೆಳೆಯನೊಂದಿಗೆ ಲಿಪ್​​-ಲಾಕ್​ ಮಾಡಿದ್ದಾಳೆ. ಇದೇ ವೇಳೆ ಹೌ ಈಸ್‌ ದಿ ಜೋಶ್‌ ಎಂದು ಇಬ್ಬರು ಜೋರಾಗಿ ಕೂಗಿದ್ದಾರೆ. ಇದಕ್ಕೆ ಇತರರು ಸಪೋರ್ಟ್​ ಮಾಡಿದ್ದಾರೆ.

ಇದೀಗ ಈ ವಿಡಿಯೋವನ್ನ ಖುದ್ದಾಗಿ ಯುವತಿ ಅನ್ವಿತ ತಮ್ಮ ಟ್ವೀಟರ್​​ನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ABOUT THE AUTHOR

...view details