ಸಿಡ್ನಿ:ಭಾರತ ಮೂಲದ ಯುವಕನೊಬ್ಬ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲೇ ಪ್ರಪೋಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ಇಂಡೋ-ಕಾಂಗ್ರೋ ಪ್ರೇಮ.. ಗ್ರೌಂಡ್‌ನಲ್ಲೇ ಆಸೀಸ್ ಗೆಳತಿಗೆ ಭಾರತೀಯನಿಂದ ಪ್ರಪೋಸ್.. ವಿಡಿಯೋ ವೈರಲ್!! - ಮೈದಾನದಲ್ಲೆ ಕ್ರಿಕೆಟ್ ಅಭಿಮಾನಿಯಿಂದ ಪ್ರಪೋಸ್
ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬ ತನ್ನ ಆಸ್ಟ್ರೇಲಿಯಾದ ಗೆಳತಿಗೆ ಉಂಗುರ ನೀಡಿ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದಾನೆ..
ಭಾರತೀಯನಿಂದ ಆಸೀಸ್ ಗೆಳತಿಗೆ ಪ್ರಪೋಸ್
ಎರಡನೇ ಇನ್ನಿಂಗ್ಸ್‌ನಲ್ಲಿ 20 ಓವರ್‌ಗಳು ಪೂರ್ಣಗೊಂಡ ನಂತರ ಸಿಡ್ನಿ ಮೈದಾನ ವಿಶೇಷ ಘಟನೆಗೆ ಸಾಕ್ಷಿ ಆಗಿದೆ. ಭಾರತೀಯ ಅಭಿಮಾನಿಯೊಬ್ಬ ಆಸ್ಟ್ರೇಲಿಯಾದ ತನ್ನ ಗೆಳತಿಗೆ ಉಂಗುರ ನೀಡಿ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದಾನೆ. ತನ್ನ ಗೆಳೆಯನ ಪ್ರೇಮ ನಿವೇದನೆ ಕಂಡು ಆಶ್ಚರ್ಯಗೊಂಡ ಯುವತಿ ಕೂಡಲೇ ಒಪ್ಪಿಗೆ ಸೂಚಿಸಿದ್ದಾಳೆ.
ಮೈದಾನದ ದೊಡ್ಡ ಸ್ಕ್ರೀನ್ನಲ್ಲಿ ಈ ಅಪರೂಪದ ಘಟನೆ ತೋರಿಸಲಾಯಿತು. ಮೈದಾನದಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಆಸೀಸ್ ಕ್ರಿಕೆಟಿಗ ಮ್ಯಾಕ್ಸ್ವೆಲ್ ಚಪ್ಪಾಳೆ ತಟ್ಟುವ ಮೂಲಕ ಜೋಡಿಯನ್ನು ಅಭಿನಂದಿಸಿದ್ದಾರೆ.
Last Updated : Nov 30, 2020, 1:18 PM IST