ಸಿಡ್ನಿ:ಭಾರತೀಯ ಕ್ರಿಕೆಟಿಗರಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮೇಲಿನ ಜನಾಂಗೀಯ ನಿಂದನೆಯ ಬಗ್ಗೆ ಸಿಡ್ನಿ ಕ್ರಿಕೆಟ್ ಬೋರ್ಡ್ ತನಿಖೆ ನಡೆಸುತ್ತಿದೆ. ಎಸ್ಸಿಜಿಯ ಕಾರ್ಯನಿರತ ಭದ್ರತಾ ಸಿಬ್ಬಂದಿಯೋರ್ವರು ತಮ್ಮನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಅಭಿಮಾನಿಯೊಬ್ಬರು ಬೋರ್ಡ್ಗೆ ಮತ್ತೊಂದು ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಡ್ನಿಯಲ್ಲಿ ವಾಸಿಸುತ್ತಿರುವ ಕೃಷ್ಣ ಕುಮಾರ್ ಎಂಬಾತ ಈ ಬಗ್ಗೆ ಅಧಿಕೃತ ದೂರು ದಾಖಲಿಸಿದ್ದಾರೆ. ಸಿಡ್ನಿ ಟೆಸ್ಟ್ನ 5 ನೇ ದಿನ ರಿವರ್ಲಿ ಇಸ್ ಗುಡ್, ನೋ ರೇಸಿಸಂ ಮೇಟ್, ಬ್ರೌನ್ ಇನ್ಕ್ಲೂಸನ್ ಮ್ಯಾಟರ್, ಕ್ರಿಕೆಟ್ ಆಸ್ಟ್ರೇಲಿಯಾ ಎಂಬ ವರ್ಣಭೇದ ವಿರೋಧಿ ನೀತಿಯ ಬ್ಯಾನರ್ಗಳನ್ನು ಮೈದಾನಕ್ಕೆ ಕೊಂಡೊಯ್ಯುವಾಗ ಭದ್ರತಾ ಸಿಬ್ಬಂದಿ ತಮ್ಮನ್ನು ತಡೆದು, ಅಲ್ಲಿದ್ದ ಅಧಿಕಾರಿಗಳು ತಮಗೆ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಕೃಷ್ಣ ಕುಮಾರ್ ತಿಳಿಸಿದ್ದಾರೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ, ಕುಮಾರ್ ಅವರ ಬ್ಯಾನರ್‌ಗಳಲ್ಲಿ ಒಂದು ದೊಡ್ಡ ಗಾತ್ರದಾಗಿದ್ದ ಕಾರಣ ಅದನ್ನು ಮೈದಾನದೊಳಗೆ ತೆಗೆದುಕೊಂಡು ಹೋಗಲು ಅನುಮತಿ ನೀಡದೆ ಗೇಟ್‌ನಲ್ಲಿ ನಿಲ್ಲಿಸಲಾಗಿದೆ. ನಂತರ ಅವರು ಭದ್ರತಾ ಮೇಲ್ವಿಚಾರಕರೊಂದಿಗೆ ಮಾತನಾಡಲು ಬಯಸಿದಾಗ, ಅಲ್ಲಿನ ಅಧಿಕಾರಿ ಅಲ್ಲಿಂದ ಹೋಗಲು ತಿಳಿಸಿದ್ದಾರೆಂದು ವರದಿಯಾಗಿದೆ.
'ನೀವು ಈ ವಿಚಾರವನ್ನು ತಿಳಿಸಬೇಕೆಂದಿದ್ದರೆ, ನಿಮಗೆ ಸೇರಿರುವ (ಭಾರತ) ಸ್ಥಳಕ್ಕೆ ನೀವು ಹಿಂತಿರುಗಿ' ಎಂದು ಅವರು ನನಗೆ ಹೇಳಿದರು. ಬ್ಯಾನರ್ ತುಂಬಾ ಸಣ್ಣದಿದ್ದು, ನಾನು ನನ್ನ ಮಕ್ಕಳ ಪೇಪರ್ ರೋಲ್ನಿಂದ ತಯಾರಿಸಿದ್ದೇನೆ ಎಂದರೂ ಅನುಮತಿ ನೀಡಲಿಲ್ಲ. ಎಲ್ಲವನ್ನೂ ಕಾರಿನಲ್ಲಿರಿಸಿದ ನಂತರ, ಮೆಟಲ್ ಡಿಟೆಕ್ಟರ್ ಮೂಲಕ ಸುದೀರ್ಘ ಪರಿಶೀಲನೆ ನಡೆಸಿದರು. ಈ ವೇಳೆ ನನ್ನೊಂದಿಗೆ ತುಂಬಾ ಆಕ್ರಮಣಕಾರಿಯಾಗಿ ವರ್ತಿಸಿದರು ಎಂದು ಕೃಷ್ಣ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಗಬ್ಬಾ ಮೈದಾನದಲ್ಲೂ ಸಿರಾಜ್, ವಾಷಿಂಗ್ಟನ್ ಸುಂದರ್ಗೆ ಜನಾಂಗೀಯ ನಿಂದನೆ