ನವದೆಹಲಿ:ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಫೆಬ್ರವರಿ 5ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡದ ಎಲ್ಲಾ ಆಟಗಾರರು ಜನವರಿ 27ರಂದು ಚೆನ್ನೈಗೆ ಬಂದು ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸರಣಿಗಾಗಿ ದೇಶದ ವಿವಿಧ ನಗರಗಳಿಂದ ವಿವಿಧ ಬ್ಯಾಚ್ಗಳಲ್ಲಿ ಆಟಗಾರರು ಚೆನ್ನೈಗೆ ಧಾವಿಸಲಿದ್ದಾರೆ. ಐಪಿಎಲ್, ಆಸ್ಟ್ರೇಲಿಯಾದ ನಂತರ ಮತ್ತೊಂದು ಬಯೋ ಬಬಲ್ ಸಿದ್ಧವಾಗುತ್ತಿದ್ದು, ಅಲ್ಲಿ ಆಟಗಾರರು 7 ದಿನಗಳ ಕ್ವಾರಂಟೈನ್ಗೆ ಒಳಪಡಲಿದ್ದಾರೆ. ಈ ಅವಧಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ತಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್ ತಂಡ 26ಕ್ಕೆ ಆ ಸರಣಿ ಮುಗಿಯುತ್ತಿದ್ದಂತೆ ಜನವರಿ 27ರಂದೇ ಭಾರತಕ್ಕೆ ಆಗಮಿಸಿ ಬಯೋ ಬಬಲ್ ಸೇರಿಕೊಳ್ಳಲಿದೆ. ಇನ್ನು ನೇರವಾಗಿ ಇಂಗ್ಲೆಂಡ್ನಿಂದ ಭಾರತಕ್ಕೆ ಬರಲಿರುವ ಆಲ್ರೌಂಡರ್ ಬೆನ್ ಸ್ಟೋಕ್ಸ್, ಪೇಸರ್ ಜೋಫ್ರಾ ಆರ್ಚರ್ ಮತ್ತು ಆರಂಭಿಕ ಬ್ಯಾಟ್ಸ್ಮನ್ ರೋನಿ ಬರ್ನ್ಸ್ ಇಂಗ್ಲೆಂಡ್ ತಂಡಕ್ಕಿಂತ ಬೇಗನೆ ಭಾರತಕ್ಕೆ ಆಗಮಿಸಿಲಿದ್ದಾರೆ. ಅವರು ಶ್ರೀಲಂಕಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡಿದ್ದಾರೆ.
ಎರಡೂ ತಂಡದ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಚೆನ್ನೈನ ಲೀಲಾ ಪ್ಯಾಲೇಸ್ನಲ್ಲಿ ಉಳಿದುಕೊಳ್ಳಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯ ಮುಂದುವರೆಸುವ ಆಲೋಚನೆಯಲ್ಲಿ ಕೊಹ್ಲಿ ಪಡೆ