ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಕೋವಿಡ್​ ವರದಿ ನೆಗೆಟಿವ್​.. ನಾಳೆಯಿಂದ ನೆಟ್​ನಲ್ಲಿ ಅಭ್ಯಾಸ

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಚೆನ್ನೈನಲ್ಲಿ ಬೀಡು ಬಿಟ್ಟಿದ್ದು, ಅವರಿಗೆ ನಡೆಸಿರುವ ಕೋವಿಡ್ ಪರೀಕ್ಷೆ ಫಲಿತಾಂಶ ಇಂದು ಬಹಿರಂಗಗೊಂಡಿದೆ.

By

Published : Feb 1, 2021, 6:57 PM IST

Indian cricketers
Indian cricketers

ಚೆನ್ನೈ: ಮೂರು ದಿನಗಳ ಕಾಲ ಕ್ವಾರಂಟೈನ್​ಗೊಳಾಗಿದ್ದ ಟೀಂ ಇಂಡಿಯಾ ಕ್ರಿಕೆಟರ್ಸ್​ಗೆ ಇಂದು ನಡೆಸಿರುವ ಕೋವಿಡ್​ ವರದಿ ರಿಪೋರ್ಟ್​ ನೆಗೆಟಿವ್​ ಬಂದಿರುವ ಕಾರಣ ಅವರು ನಾಳೆಯಿಂದ ನೆಟ್​​ನಲ್ಲಿ ಅಭ್ಯಾಸ ನಡೆಸಲಿದ್ದಾರೆ.

ಫೆ.5ರಿಂದ ಚೆನ್ನೈ ಪಿ.ಚಿದಂಬರಂ ಮೈದಾನದಲ್ಲಿ ಇಂಗ್ಲೆಂಡ್​ - ಭಾರತ ತಂಡಗಳ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕಾಗಿ ಉಭಯ ತಂಡಗಳು ಈಗಾಗಲೇ ಚೆನ್ನೈನಲ್ಲಿ ಬೀಡು ಬಿಟ್ಟಿವೆ.

ಇಂದು ಬೆಳಗ್ಗೆ ಎಲ್ಲ ಪ್ಲೇಯರ್ಸ್​ಗಳನ್ನ ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ವರದಿ ನೆಗೆಟಿವ್​ ಬಂದಿದೆ. ಇನ್ನು ಇಂಗ್ಲೆಂಡ್ ಕ್ರಿಕೆಟರ್ಸ್​ ಕೂಡ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಉಭಯ ತಂಡದ ಪ್ಲೇಯರ್ಸ್ ನಾಳೆಯಿಂದ ನೆಟ್​ನಲ್ಲಿ ಅಭ್ಯಾಸ ನಡೆಸಲು ಮುಂದಾಗಲಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಬೆವರು ಹರಿಸಲಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಟೀಂ ಇಂಡಿಯಾ ಲಗ್ಗೆ ಹಾಕಬೇಕಾದರೆ ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಳ್ಳಬೇಕಾಗಿದೆ. ಒಂದು ವೇಳೆ, ಟೀಂ ಇಂಡಿಯಾ ಮೊದಲ ಟೆಸ್ಟ್​ ಪಂದ್ಯ ಕೈಚೆಲ್ಲಿದರೆ ಮುಂದಿನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಳ್ಳಲಿದೆ.

ABOUT THE AUTHOR

...view details