ಮುಂಬೈ:ಕಳೆದ ಮೂರು ವರ್ಷಗಳ ಕಾಲ ಟೀಂ ಇಂಡಿಯಾ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದ ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪೆನಿ ಒಪ್ಪೋ ಬ್ರ್ಯಾಂಡ್ ಬದಲಾವಣೆಗೊಂಡಿದ್ದು, ಇದೀಗ ದೇಸಿ ಬ್ರ್ಯಾಂಡ್ ಟೀಂ ಇಂಡಿಯಾ ಜರ್ಸಿಯಲ್ಲಿ ಮಿಂಚಲಿದೆ.
ಟೀಂ ಇಂಡಿಯಾ ಜರ್ಸಿಯಲ್ಲಿ ಹೊಸ ಬ್ರ್ಯಾಂಡ್... ಚೀನಾ ಮೂಲದ ಒಪ್ಪೋಗೆ ಗೇಟ್ ಪಾಸ್ ನೀಡಿದ ದೇಶಿ ಕಂಪೆನಿ! - ಮುಂಬೈ
ಟೀಂ ಇಂಡಿಯಾ ಜರ್ಸಿಯಲ್ಲಿ ಇನ್ಮುಂದೆ ಹೊಸ ಬ್ರ್ಯಾಂಡ್ ಕಾಣಿಸಿಕೊಳ್ಳಲಿದ್ದು, ಚೀನಾ ಮೂಲಕ ಒಪ್ಪೋ ಕಂಪನಿಗೆ ದೇಶಿ ಕಂಪನಿ ಗೇಟ್ ಪಾಸ್ ನೀಡಿದೆ.
ಕೇರಳ ಮೂಲದ ಬೈಜುಸ್ ಟೀಂ ಇಂಡಿಯಾ ಜರ್ಸಿಯಲ್ಲಿ ಕಾಣಿಸಲಿದ್ದು, ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಯಿಂದ ಈ ಹೆಸರು ಟೀಂ ಇಂಡಿಯಾ ಜರ್ಸಿ ಮೇಲೆ ಕಾಣಸಿಗಲಿದೆ. 2017 ಮಾರ್ಚ್ ತಿಂಗಳಲ್ಲಿ ಐದು ವರ್ಷಗಳ ಅವಧಿಗೆ ಬರೋಬ್ಬರಿ 1079 ಕೋಟಿ ರುಪಾಯಿಗಳಿಗೆ ಒಪ್ಪೋ ಬಿಡ್ ಗೆದ್ದಿತ್ತು. ಅದಕ್ಕೂ ಮುಂಚಿತವಾಗಿ ವಿವೋ 768 ಕೋಟಿಗೆ ಈ ಬಿಡ್ ಖರೀದಿ ಮಾಡಿತ್ತು. ಮಧ್ಯದಲ್ಲೇ ಒಪ್ಪೋ ಜರ್ಸಿ ಮೇಲೆ ಹಾಕಿರುವ ತನ್ನ ಬ್ರ್ಯಾಂಡ್ ಹೆಸರು ತೆಗೆಯಲು ನಿರ್ಧರಿಸಿದೆ.
ಕೇರಳ ಮೂಲದ ಬೈಜು ರವೀಂದ್ರನ್ ಒಡೆತನದ ಬೈಜುಸ್ ಕಂಪೆನಿ ಪಡೆದುಕೊಂಡಿದ್ದು, ಬೈಜುಸ್ ಶೈಕ್ಷಣಿಕ ತಂತ್ರಜ್ಞಾನ ಟೂರಿಂಗ್ ಸಂಸ್ಥೆಯಾಗಿದೆ. ಇನ್ನು ಮುಂದಿನ ವೆಸ್ಟ್ ಇಂಡೀಸ್ ಸರಣಿಯಲ್ಲಿ ಒಪ್ಪೋ ಬ್ರ್ಯಾಂಡ್ ಕಾಣಲಿದ್ದು, ಸೆಪ್ಟೆಂಬರ್ನಲ್ಲಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ವೇಳೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಬೈಜುಸ್ ಲೊಗೊ ಕಂಡುಬರಲಿದೆ. 2022 ಮಾರ್ಚ್ 31ರ ವರೆಗೆ ಈ ಲೋಗೋ ಜರ್ಸಿಯಲ್ಲಿರಲಿದೆ.