ಕರ್ನಾಟಕ

karnataka

ETV Bharat / sports

ವಿಶ್ವಕಪ್​​ನಲ್ಲೂ ಉತ್ತಮ ತಂಡದಿಂದ ಸೋಲು, ಟೆಸ್ಟ್​​ನಲ್ಲೂ ಪುನರಾವರ್ತನೆ: ಕೊಹ್ಲಿ ಸಮರ್ಥನೆ - ಇಂಡಿಯಾ ವರ್ಸಸ್​ ನ್ಯೂಜಿಲ್ಯಾಂಡ್​

ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು.

Indian cricket team captain
Indian cricket team captain

By

Published : Mar 2, 2020, 10:24 AM IST

ಕ್ರೈಸ್ಟ್​ಚರ್ಚ್​​: ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ವೈಟ್​​ವಾಶ್​ ಮುಖಭಂಗ ಅನುಭವಿಸಿದ್ದು, ವಿದೇಶ ನೆಲದಲ್ಲಿ ಮತ್ತೊಮ್ಮೆ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿದೆ.

ವಿರಾಟ್​​ ಕೊಹ್ಲಿ,ಕ್ಯಾಪ್ಟನ್​

ಎರಡನೇ ಟೆಸ್ಟ್​​ ಪಂದ್ಯದಲ್ಲಿ ಸೋಲು ಕಂಡ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು. ಟೆಸ್ಟ್​ ಸರಣಿಯಲ್ಲಿ ನಾವು ಅದುಕೊಂಡಿರುವ ಹಾಗೇ ಆಡಿಲ್ಲ. ನಾವು ತಂಡವಾಗಿ ಕ್ರಿಕೆಟ್​ ಆಡಲಿಲ್ಲ. ಇದರಿಂದ ಸೋಲು ಕಾಣಬೇಕಾಯಿತು. ಟೆಸ್ಟ್​​ ಸರಣಿ ಕೈಚೆಲ್ಲಿರುವುದು ನಿಜಕ್ಕೂ ನಿರಾಸೆ ಮೂಡಿಸಿದೆ ಎಂದು ತಿಳಿಸಿದರು. ಇದೇ ವೇಳೆ ಪತ್ರಕರ್ತನೋರ್ವ ಕೇಳಿರುವ ಪ್ರಶ್ನೆಗೆ ವಿರಾಟ್​ ಕೊಹ್ಲಿ ತಾಳ್ಮೆ ಕಳೆದುಕೊಂಡು ಆತನ ವಿರುದ್ಧ ಹರಿಹಾಯ್ದಿರುವ ಘಟನೆ ಕೂಡ ನಡೆದಿದೆ.

ಸರಣಿ ಸೋಲಿನಿಂದ ನಮಗೆ ಅವಮಾನವಾಗಿಲ್ಲ. ಈ ಹಿಂದಿನ ವಿಶ್ವಕಪ್​​ನಲ್ಲೂ ನಾವು ಉತ್ತಮ ತಂಡದಿಂದ ಸೋಲು ಕಂಡಿದ್ದೆವು. ಇಂದು ಅದೇ ಪುನರಾವರ್ತನೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಕ್ರಿಕೆಟ್​ ಆಡುವ ವಿಶ್ವಾಸವಿದೆ ಎಂದರು.

ABOUT THE AUTHOR

...view details