ರಾಜ್ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಸರಣಿ ಉಳಿಸಿಕೊಳ್ಳಲು ಈ ಪಂದ್ಯ ನಿರ್ಣಾಯಕವಾಗಿರುವುದರಿಂದ ರೋಹಿತ್ ಶರ್ಮಾ ಟಾಸ್ ಗೆದ್ದ ಕೂಡಲೇ ಬೌಲಿಂಗ್ ಆಯ್ಕೆಮಾಡಿಕೊಂಡರು.
ಮೊದಲ ಪಂದ್ಯದಲ್ಲಿ ಸೋಲುಕಂಡಿದ್ದರು ತಂಡದಲ್ಲಿ ರೋಹಿತ್ ಯಾವುದೇ ಬದಲಾವಣೆಯಿಲ್ಲದೆ ಅದೇ ತಂಡವನ್ನು ಮುನ್ನಡೆಸಿದ್ದಾರೆ. ಬಾಂಗ್ಲಾದೇಶ ತಂಡ ಕೂಡ ಗೆಲುವಿನ ತಂಡವನ್ನೇ ಉಳಿಸಿಕೊಂಡಿದೆ. ಇಂದಿನ ಪಂದ್ಯ ಗೆದ್ದರೆ ಭಾರತದ ವಿರುದ್ಧ ಮೊದಲ ಬಾರಿಗೆ ಟಿ20 ಸರಣಿ ಗೆದ್ದ ದಾಖಲೆಗೆ ಪಾತ್ರವಾಗಲಿದೆ