ವಾರಣಾಸಿ: ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಮಂಗಳವಾರ ರಾತ್ರಿ ಕಾಶಿಗೆ ಭೇಟಿ ನೀಡಿ ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಾಶಿಗೆ ಭೇಟಿ ನೀಡಿದ ಧವನ್: ಕಾಲಭೈರವನಿಗೆ ವಿಶೇಷ ಪೂಜೆ - ಕಾಲಭೈರವನಿಗೆ ಧವನ್ ವಿಶೇಷ ಪೂಜೆ
ಮಂಗಳವಾರ ರಾತ್ರಿ ಕಾಶಿಗೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ವಿಶ್ವನಾಥ ಮತ್ತು ಕಾಲಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶಾಲು ಹೊದಿಸಿಕೊಂಡು ಮುಖಕ್ಕೆ ಮಾಸ್ಕ್ ಹಾಕಿ ದೇವಸ್ಥಾನಕ್ಕೆ ಬಂದರೂ ಟೀಂ ಇಂಡಿಯಾ ಕ್ರಿಕೆಟಿಗನನ್ನು ಅಭಿಮಾನಿಗಳು ಗುರ್ತಿಸಿದ್ದಾರೆ. ವಿಶ್ವನಾಥ ದೇವಸ್ಥಾನದಲ್ಲಿ ನಡೆದ ಸಪ್ತಾ ರಿಷಿ ಆರತಿಯಲ್ಲಿ ಶಿಖರ್ ಭಾಗವಹಿಸಿದ್ದಾರೆ. ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡ ಧವನ್, ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ಸರಣಿ ಗೆದ್ದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ವಿಶ್ವನಾಥನ ದರ್ಶನದ ನಂತರ ಕಾಲಭೈರವ ದೇವಸ್ಥಾನಕ್ಕೆ ಭೆಟಿ ಕೊಟ್ಟು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಧವನ್ ಭೇಟಿ ಬಗ್ಗೆ ಮಾಹಿತಿ ನೀಡಿದ ಕಾಲಭೈರವ ದೇವಸ್ಥಾನ ಅರ್ಚಕರು, ಯಾವುದೋ ವಿಶೇಷ ಕಾರ್ಯಕ್ಕಾಗಿ ಆಗಮಿಸಿದ್ದರು ಎಂದಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ತನ್ನ ವಿಜಯ ರಥವನ್ನು ಇನ್ನಷ್ಟು ಮುಂದುವರಿಸಬೇಕೆಂದು ಧವನ್ ಹಾರೈಸಿದ್ದಾರೆ.