ಹೈದರಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಣೆ ಮಾಡಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸುರೇಶ್ ರೈನಾ, ಇದೇ ಮೊದಲ ಬಾರಿಗೆ 2019ರ ವಿಶ್ವಕಪ್ ಬಗ್ಗೆ ಮಾತನಾಡಿದ್ದಾರೆ.
ಈ ಪ್ಲೇಯರ್ ತಂಡದಲ್ಲಿದ್ದಿದ್ದರೆ ಟೀಂ ಇಂಡಿಯಾ 2019ರ ವಿಶ್ವಕಪ್ ಮುಡಿಗೇರಿಸಿಕೊಳ್ಳುತ್ತಿತ್ತು: ಸುರೇಶ್ ರೈನಾ
2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಇದೇ ವಿಷಯವಾಗಿ ಸುರೇಶ್ ರೈನಾ ಮಾತನಾಡಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆದ 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ 18ರನ್ಗಳ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಒಂದು ವೇಳೆ ತಂಡದಲ್ಲಿ ಅಂಬಾಟಿ ರಾಯುಡು ಇದ್ದಿದ್ದರೆ ಖಂಡಿತವಾಗಿ ತಂಡ ವಿಶ್ವಕಪ್ ಗೆಲುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಹರ್ಷಾ ಬೊಗ್ಲೆ ಜತೆ ಸಂವಾದ ನಡೆಸುತ್ತಿದ್ದ ವೇಳೆ ಈ ಮಾಹಿತಿ ಹಂಚಿಕೊಂಡಿರುವ ರೈನಾ, ನಂಬರ್ 4ನೇ ಕ್ರಮಾಂಕದಲ್ಲಿ ರಾಯುಡು ಓರ್ವ ಅದ್ಭುತ ಬ್ಯಾಟ್ಸ್ಮನ್. ವಿಶ್ವಕಪ್ಗೋಸ್ಕರ ಅವರು ಬರೋಬ್ಬರಿ ಒಂದೂವರೆ ವರ್ಷ ತಯಾರಿ ನಡೆಸಿದ್ದರು ಎಂದಿದ್ದಾರೆ.
2019 ವಿಶ್ವಕಪ್ನಲ್ಲಿ ಅಂಬಾಟಿ ರಾಯುಡುಗೆ ಕೈಬಿಟ್ಟಿದ್ದ ಟೀಂ ಇಂಡಿಯಾ ವಿಜಯ್ ಶಂಕರ್ಗೆ ಮಣೆ ಹಾಕಿತ್ತು. ಇದರ ಬೆನ್ನಲ್ಲೇ ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿ ಮತ್ತೆ ತಮ್ಮ ತೀರ್ಮಾನ ಹಿಂಪಡೆದುಕೊಂಡಿದ್ದರು. ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬೇಸರದಲ್ಲಿ ಹಠಾತ್ ನಿವೃತ್ತಿ ಘೋಷಿಸಿದ್ದ ರಾಯುಡು ಬಳಿಕ ನಿವೃತ್ತಿ ಹಿಂಪಡೆದು ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳಲ್ಲಿ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು.ಸದ್ಯ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ.