ಕರ್ನಾಟಕ

karnataka

ETV Bharat / sports

2ನೇ ಏಕದಿನ: ಕೊಹ್ಲಿ ಶತಕ, ಭುವಿ ಬೌಲಿಂಗ್ ದಾಳಿ​ಗೆ ಶರಣಾದ ಕೆರಿಬಿಯನ್ನರು! - ಭಾರತ vs ವೆಸ್ಟ್​ ವಿಂಡೀಸ್​ ‘

ಪೋರ್ಟ್​ ಆಫ್​ ಸ್ಪೈನ್​ನ ಕ್ವೀನ್ಸ್​ ಪಾರ್ಕ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ ಭಾರತ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಕೊಹ್ಲಿ ತಮ್ಮ 42ನೇ ಶತಕವನ್ನು ಪೂರ್ಣಗೊಳಿಸಿದರು. ಇನ್ನು ಕೆರಿಬಿಯನ್​ ತಂಡದ ವಿರುದ್ಧ ಹೆಚ್ಚು ರನ್​ ಗಳಿಸಿದವರಲ್ಲಿ ಕೊಹ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

India won the second odi match

By

Published : Aug 12, 2019, 6:00 AM IST

Updated : Aug 12, 2019, 7:26 AM IST

ನವದೆಹಲಿ:ನಾಯಕ ವಿರಾಟ್​ ಕೊಹ್ಲಿ ಶತಕದ (120) ಬಲದಿಂದ ಮತ್ತು ವೇಗಿ ಭುವನೇಶ್ವರ್ ಮಾರಕ ಬೌಲಿಂಗ್ (31ಕ್ಕೆ 4) ದಾಳಿಯಿಂದ ವೆಸ್ಟ್​ ಇಂಡೀಸ್​ 59 ರನ್​ಗಳ ಅಂತರದಿಂದ ಭಾರತಕ್ಕೆ ಶರಣಾಯಿತು. ಈ ಮೂಲಕ 1-0 ಸರಣಿ ಮುನ್ನಡೆ ಸಾಧಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಶಿಖರ್​ ಧವನ್ (2)​ ಮತ್ತು ರೋಹಿತ್ ಶರ್ಮಾ​ (18) ಅಲ್ಪ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು. ನಂತರ ರಿಷಭ್​ ಪಂತ್​ ಕೂಡ 20 ರನ್​ ಗಳಿಸಲಷ್ಟೇ ಶಕ್ತರಾದರು.

300 ಸರ್ದಾರನಿಗೆ ಮತ್ತೊಂದು ಗರಿ... ಲಾರಾ ದಾಖಲೆ ಸರಿಗಟ್ಟಿದ ಕ್ರಿಸ್​ ಗೇಲ್​....!

103 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಡಿಯಾಗೆ ವಿರಾಟ್​ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್ ಚೇತರಿಕೆ ನೀಡಿದರು. ಇಬ್ಬರೂ 4ನೇ ವಿಕೆಟ್​ಗೆ 125 ರನ್ ಪೇರಿಸಿದರು. ತಂಡದ ಮೊತ್ತ 226 ರನ್ ಆಗಿದ್ದಾಗ 120 ರನ್​ ಗಳಿಸಿದ್ದ ಕೊಹ್ಲಿ ಔಟಾದರು. ನಂತರ ಅಯ್ಯರ್​ 71, ಕೇದಾರ್​ ಜಾಧವ್​ 16 ರನ್​ ಬಾರಿಸಿ ವಿಕೆಟ್​ ಒಪ್ಪಿಸಿದರು. ರವೀಂದ್ರ ಜಡೆಜಾ 16 ರನ್​ ಗಳಿಸಿ ಅಜೇಯರಾಗುಳಿದರು. ಕೊಹ್ಲಿಯ 42ನೇ ಶತಕ ಹಾಗೂ ಅಯ್ಯರ್​ ಅರ್ಧಶತಕದ (71) ನೆರವಿನಿಂದ ಟೀಂ ಇಂಡಿಯಾ 2ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್​ ಕಳೆದುಕೊಂಡು ವಿಂಡೀಸ್​ಗೆ 280 ರನ್​ಗಳ ಗುರಿ ನೀಡಿತು.

ಇಂಡಿಯಾ ನೀಡಿದ್ದ ಗುರಿ ಬೆನ್ನಟ್ಟಲು ಮುಂದಾದ ಕೆರಿಬಿಯನ್​ ಬ್ಯಾಟ್ಸ್‌ಮನ್‌ಗಳಿಗೆ ಇಂಡಿಯಾ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಪವರ್‌ ಪ್ಲೇನಲ್ಲಿಯೇ 11 ರನ್​ಗಳಿಸಿದ್ದ ದೈತ್ಯ ಕ್ರೀಸ್​ಗೇಲ್​ರನ್ನು ಭುವಿ ಬೌಲಿಂಗ್​ನಲ್ಲಿ ಎಲ್​ಡ​ಬ್ಲ್ಯೂ ಆದರು. ಬಳಿಕ ಶೈ ಹೋಪ್ (5) ರನ್​ ಹೆಚ್ಚು ರನ್​ಗಳಿಸುವಲ್ಲಿ ವಿಫಲರಾದರು. ಈ ವೇಳೆ ಮಳೆ ಸುರಿದ ಪರಿಣಾಮ ಓವರ್​ಗತಿಯನ್ನು 46ಕ್ಕೆ ಇಳಿಸಿ 270 ರನ್​ಗಳ ಟಾರ್ಗೆಟ್​ ನಿಗದಿಪಡಿಸಲಾಯಿತು. ಮತ್ತೆ ಪಂದ್ಯ ಆರಂಭವಾದ ಬೆನ್ನಲ್ಲೇ ಶಿಮ್ರಾನ್​ ಹೆಟ್ಮಾಯರ್​ (18) ಕೂಡ ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

ಕೆರಿಬಿಯನ್ನರ ವಿರುದ್ಧ 26 ವರ್ಷಗಳ ಹಿಂದಿನ ದಾಖಲೆ ಮುರಿದ ವಿರಾಟ್​!

ಬಳಿಕ ಆರಂಭಿಕ ಎವಿನ್​ ಲೆವಿಸ್​ ಅರ್ಧಶತಕ (65) ಮತ್ತು ನಿಕೋಲಸ್ ಪೂರನ್​ (42) ತಂಡಕ್ಕೆ ಸ್ಪಲ್ಪ ಚೇತರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಉಳಿದ ಬ್ಯಾಟ್ಸ್​ಮನ್​ಗಳು ಬಿಗಿ ಬೌಲಿಂಗ್​​ ದಾಳಿಯಿಂದ ವೆಸ್ಟ್​ ಇಂಡೀಸ್​ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 210 ರನ್​ ಗಳಿಸಿತು. ವಿಂಡೀಸ್​ ವಿರುದ್ಧ ಭಾರತ ತಂಡಕ್ಕೆ 59 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.

ಭಾರತದ ಪರ ಭುವಿ 4, ಮೊಹಮ್ಮದ್​ ಶಮಿ, ಕುಲದೀಪ್​ ಯಾದವ್​ ತಲಾ 2 ಮತ್ತು ಕಖಲ್​ ಅಹಮ್ಮದ್​, ರವೀಂದ್ರ ಜಡೇಜಾ ತಲಾ 1 ವಿಕೆಟ್​ ಪಡೆದುಕೊಂಡರು. ವಿರಾಟ್​ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ವಿರಾಟನ 42ನೇ ಸೆಂಚುರಿ: ದಾದಾ-ಪಾಂಟಿಂಗ್​​​ ದಾಖಲೆ ಹಿಂದಿಕ್ಕಿದ ರನ್​​​ ಮಷಿನ್​!

Last Updated : Aug 12, 2019, 7:26 AM IST

ABOUT THE AUTHOR

...view details