ಕರ್ನಾಟಕ

karnataka

ETV Bharat / sports

ಹರ್ಮನ್​ ಪ್ರೀತ್​ ಕೌರ್‌ಗೆ ಕ್ರಿಕೆಟ್‌ನಲ್ಲಿ ರೋಲ್‌ ಮಾಡೆಲ್ ಯಾರು?​ - ಕೌರ್​ ರೋಲ್​ ಮಾಡೆಲ್​ ವಿರೇಂದ್ರ ಸೆಹ್ವಾಗ್​

ಹರ್ಮನ್ ಪ್ರೀತ್ ಕೌರ್ 2017ರ ಮಹಿಳಾ ವಿಶ್ವಕಪ್​ನಲ್ಲಿ ಶತಕ ಸಿಡಿಸುವ ಮೂಲಕ ಭಾರತದಲ್ಲಿ ಮಹಿಳಾ ಕ್ರಿಕೆಟ್​ ಬೆಳವಣಿಗೆಗೆ ನಾಂದಿ ಹಾಡಿದ್ದರು. ಇದೀಗ ಅವರು ಕ್ರಿಕ್​ಬಜ್ ​ಜೊತೆಗೆ ನಡೆಸಿದ ಸಂವಾದದಲ್ಲಿ ತಮ್ಮ ನೆಚ್ಚಿನ ಆಟಗಾರನನ್ನು ಹೆಸರಿಸಿದ್ದಾರೆ.

Harmanpreet Kaur
ಹರ್ಮನ್​ ಪ್ರೀತ್​ ಕೌರ್​

By

Published : Jul 15, 2020, 6:05 PM IST

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಅವರಿಗೆ ವೀರೇಂದ್ರ ಸೆಹ್ವಾಗ್​ ಪ್ರೇರಣೆಯಾಗಿದ್ದರು ಎಂದು ಹೇಳಿದ್ದಾರೆ.

ಕೌರ್‌, 2017ರ ಮಹಿಳಾ ವಿಶ್ವಕಪ್​ನಲ್ಲಿ ಶತಕ ಸಿಡಿಸಿ ಭಾರತದಲ್ಲಿ ಮಹಿಳಾ ಕ್ರಿಕೆಟ್​ ಬೆಳವಣಿಗೆಗೆ ನಾಂದಿ ಹಾಡಿದ್ದರು. ಕ್ರಿಕ್​ಬಜ್ ​ಜೊತೆಗೆ ನಡೆಸಿದ ಸಂವಾದದಲ್ಲಿ ತಮ್ಮ ನೆಚ್ಚಿನ ಆಟಗಾರನ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಪ್ರಸ್ತುತ ಕ್ರಿಕೆಟ್​ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌​ ಆಗಿರುವ ಹರ್ಮನ್​ ಪ್ರೀತ್​ ಕೌರ್,​ ಭಾರತದ ಪರ ಎರಡು ತ್ರಿಶತಕ ಸಿಡಿಸಿರುವ ಸೆಹ್ವಾಗ್​ ಅವರನ್ನು ಮಾದರಿಯನ್ನಾಗಿ ತೆಗೆದುಕೊಂಡಿದ್ದೆ. ಅಲ್ಲದೆ ತಾವೂ ಅವರ ಜೊತೆಗೆ ಮೊದಲ ಬಾರಿಗೆ ಮಾತನಾಡಿದ್ದ ಪ್ರಸಂಗವನ್ನು ವಿವರಿಸಿದ್ದಾರೆ.

ವೀರೇಂದ್ರ ಸೆಹ್ವಾಗ್​

ನಾನು ಅವರಿಗೆ ಮೊದಲ ಸಲ, ಸರ್,​ ನಾನು ನಿಮ್ಮೊಂದಿಗೆ ಮಾತನಾಡಲು ಬಯಸಿದ್ದೇನೆ. ನಿಮಗೆ ಸಮಯವಿದ್ದರೆ ಮಾತನಾಡಿ ಎಂದು ಮೊಬೈಲ್​ನಲ್ಲಿ ಸಂದೇಶ ಕಳುಹಿಸಿದ್ದೆ. ನೀವು ನಂಬುವುದಿಲ್ಲ ಅಂದುಕೊಂಡಿದ್ದೇನೆ. ಅವರು ಎರಡೇ ಸೆಕೆಂಡ್​ಗಳಲ್ಲಿ ನನಗೆ ಕರೆ ಮಾತನಾಡಿದರು. ಆದರೆ ನಾನು ಅವರು ನನ್ನ ಸಂದೇಶವನ್ನು ನೋಡುವುದಿಲ್ಲ ಅಥವಾ 10 ದಿನಗಳ ನಂತರ ನೋಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರು ಸಮಾಧಾನವಾಗಿ ಮಾತನಾಡಿದ್ದರು. ತಾಳ್ಮೆಯಿಂದ ನನ್ನ ಸಮಸ್ಯೆಗಳನ್ನು ಆಲಿಸಿ, ಸಲಹೆ ನೀಡಿದರು. ನಂತರ ಅವರ ಮೇಲೆ ನನಗೆ ಗೌರವ ಹೆಚ್ಚಾಯಿತು ಎಂದು ಹೇಳಿದ್ದಾರೆ.

ನಾವು ನಮ್ಮ ನೆಚ್ಚಿನ ಕ್ರಿಕೆಟಿಗರೊಂದಿಗೆ ಮಾತನಾಡಲು, ಸೆಲ್ಫಿ ತೆಗೆದುಕೊಳ್ಳುವ ಕನಸು ಕಾಣುತ್ತಿರುತ್ತೇವೆ. ಅಂಥದ್ರದಲ್ಲಿ ಅವರೊಂದಿಗೆ ಮಾತನಾಡುವುದು, ಅವರಾಗಿಯೇ ಮಾತನಾಡುವುದು ತುಂಬಾ ಅಪರೂಪ ಎಂದು ಹೇಳಿದರು.

ಕೌರ್​ ಇದೀಗ ಭಾರತ ಟಿ20 ತಂಡದ ನಾಯಕಿಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ 2020ರ ಟಿ20 ವಿಶ್ವಕಪ್​ನಲ್ಲಿ ಇವರ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿತ್ತು. ಆದರೆ ಫೈನಲ್​ನಲ್ಲಿ ಸೋಲನುಭವಿಸಿ ರನ್ನರ್​ ಅಪ್​ಗೆ ತೃಪ್ತಿ ಪಟ್ಟುಕೊಂಡಿತ್ತು.

For All Latest Updates

TAGGED:

ABOUT THE AUTHOR

...view details