ಸೇಂಟ್ ಲೂಸಿಯಾ: ಭಾರತ ಮಹಿಳಾ ತಂಡ ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 84 ರನ್ಗಳ ಭರ್ಜರಿ ಜಯ ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ 143 ರನ್ಗಳ ದಾಖಲೆಯ ಜೊತೆಯಾಟ ನೀಡಿದರು.
ಮಂಧಾನ 46 ಎಸೆತಗಳಲ್ಲಿ 11 ಬೌಂಡರಿ ಸಹಿತ 67 ರನ್ ಗಳಿಸಿದರೆ, 15 ವರ್ಷದ ಶಫಾಲಿ ವರ್ಮಾ 49 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 73 ರನ್ ಗಳಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 21ರನ್, ವೇದ ಕೃಷ್ಣಮೂರ್ತಿ 15 ರನ್ ಗಳಿಸಿ 185 ಬೃಹತ್ ಮೊತ್ತಕ್ಕೆ ನೆರವಾದರು.