ನ್ಯಾಟಿಂಗ್ಹ್ಯಾಮ್:ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಕ್ರೀಡಾಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡ್ತಿದೆ. ಇದರ ಮಧ್ಯೆ ಭಾರತ-ಬಾಂಗ್ಲಾ ತಂಡಗಳ ನಡುವಿನ ಪಂದ್ಯ ವೀಕ್ಷಣೆಗಾಗಿ ವಿಶೇಷ ಅತಿಥಿಯೊಬ್ಬರು ಆಗಮಿಸಿ ಕೊಹ್ಲಿ ಪಡೆಗೆ ಸಪೋರ್ಟ್ ಮಾಡಿದ್ದಾರೆ.
87 ವರ್ಷದ ಚಾರುಲತಾ ಪಟೇಲ್ ಇಂದಿನ ಪಂದ್ಯದ ಕೇಂದ್ರಬಿಂದು. ಟೀಂ ಇಂಡಿಯಾ ಪ್ಲೇಯರ್ಸ್ಗೆ ಚಿಯರ್ ಮಾಡ್ತಾ, ಕೈಯಲ್ಲಿ ಹಿಡಿದುಕೊಂಡಿದ್ದ ಪೀಪಿ ಊದುವುದರೊಂದಿಗೆ ಎಲ್ಲರ ಹೃದಯ ಗೆದ್ದಿದ್ದಾರೆ.
ಇನ್ನು ಇದೇ ವೇಳೆ ಚಾರುಲತಾ ಮಾತನಾಡಿದ್ದು, ನಾನು ಲಾರ್ಡ್ ಗಣೇಶನ ಹತ್ತಿರ ಬೇಡಿಕೊಂಡಿರುವೆ. ಈಸಲದ ವಿಶ್ವಕಪ್ ಖಂಡಿತವಾಗಿ ಟೀಂ ಇಂಡಿಯಾ ಗೆಲ್ಲಲ್ಲಿದೆ. ನನ್ನ ಆಶೀರ್ವಾದ ತಂಡದ ಮೇಲೆ ಯಾವಾಗಲೂ ಇರುತ್ತದೆ ಎಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಮೈದಾನಗಳಿಗೆ ತೆರಳಿ ನಾನು ಟೀಂ ಇಂಡಿಯಾ ಪಂದ್ಯಗಳ ವೀಕ್ಷಣೆ ಮಾಡುತ್ತಿರುವೆ. ಈ ಹಿಂದೆ ಕೆಲಸ ಮಾಡ್ತಿದ್ದಾಗ ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದೆ. ಇದೀಗ ನಿವೃತ್ತಿಗೊಂಡಿರುವ ಕಾರಣ ಮೈದಾನಕ್ಕೆ ತೆರಳಿ ಮ್ಯಾಚ್ ನೋಡಿ, ಭಾರತಕ್ಕೆ ಸಪೋರ್ಟ್ ಮಾಡುತ್ತೇನೆ ಎಂದಿದ್ದಾರೆ.
ವಿಶೇಷವೆಂದರೆ 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದಾಗಲೂ ಇವರು ಮೈದಾನದಲ್ಲಿದ್ದರಂತೆ. ಈಗಲೂ ನಾನು ಮೈದಾನದಲ್ಲಿರುವೆ. ಖಂಡಿತವಾಗಿ ಈ ಸಲ ಭಾರತ ಕಪ್ ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದ್ದಾರೆ.