ನವೆದೆಹಲಿ: ಖೇಲೋ ಇಂಡಿಯಾ ಕ್ರೀಡಾಕೂಟದ ಜೊತೆಯಲ್ಲಿಯೇ 2021ರ ಬ್ರಿಕ್ಸ್ ಗೇಮ್ಸ್ಅನ್ನು ಯೋಜಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾ ಕಿರಣ್ ರಿಜಿಜು ಹೇಳಿದ್ದಾರೆ.
2021ರ ಖೇಲೋ ಇಂಡಿಯಾ ಗೇಮ್ಸ್ ನಡೆಯುವ ವೇಳೆ ಅದೇ ಸ್ಥಳದಲ್ಲಿ 2021ರ ಬ್ರಿಕ್ಸ್ ಗೇಮ್ಸ್ ಆಯೋಜನೆ ಮಾಡಲಾಗುವುದು. ಇದರಿಂದ ದೇಶದ ವಿವಿಧ ಭಾಗಗಳಿಂದ ಬರುವ ಕ್ರೀಡಾಪಟುಗಳು ಬ್ರಿಕ್ಸ್ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದ್ದು, ಇದರಿಂದ ಅನುಕೂಲು ಪಡೆಯಲಿದ್ದಾರೆ. ಇದು ಅವರಿಗೆ ಉತ್ತಮ ಆತ್ಮಸ್ಥೈರ್ಯ ಮತ್ತು ಪ್ರೇರಣೆ ಹೆಚ್ಚಿಸಲಿದೆ ಎಂದು ಕಿರಣ್ ರಿಜಿಜು ಹೇಳಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳ ಕ್ರೀಡಾಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಕ್ರೀಡೆಯ ಮಹತ್ವ ಮತ್ತು ನಾಗರೀಕರ ಜೀವನದ ಗುಣಮಟ್ಟ ಹಾಗೂ ಬ್ರಿಕ್ಸ್ ರಾಷ್ಟ್ರಗಳು ನಡುವಿನ ಸಹಯೋಗದಿಂದ ಕೋವಿಡ್ 19 ನಂತರ ಕ್ರೀಡೆಯನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದರ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ 19 ಅನ್ಲಾಕ್ ನಂತರ ಭಾರತದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವ ಬಗ್ಗೆ ಮಾತನಾಡಿದ ಅವರು, ಭಾರತದ ಅಧ್ಯಕ್ಷತೆಯಲ್ಲಿ 2021ರ ಬ್ರಿಕ್ಸ್ ಕ್ರೀಡಾ ಕೂಟ ಒಂದಾಗಲಿದೆ. ಖೇಲೋ ಇಂಡಿಯಾ ಯೋಜನೆಯಡಿ ಭಾರತ ಸರ್ಕಾರ ವಾರ್ಷಿಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.