ಚೆನ್ನೈ:ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರು ಟಿ-20 ಪಂದ್ಯಗಳ ಸರಣಿ ಗೆದ್ದಿರುವ ಟೀಂ ಇಂಡಿಯಾ, ಭಾನುವಾರದಿಂದ ಆರಂಭಗೊಳ್ಳಲಿರುವ ಏಕದಿನ ಸರಣಿ ಮೇಲೆ ಕಣ್ಣಿಟ್ಟಿದೆ.
ಏಕದಿನ ಕ್ರಿಕೆಟ್ ಸರಣಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯಾರು ಬ್ಯಾಟ್ ಬೀಸಬೇಕು? ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಕುಂಬ್ಳೆ ಪ್ರಕಾರ, ಯುವ ಆಟಗಾರ ಶ್ರೇಯಸ್ ಅಯ್ಯರ್ಗೆ ಆ ಸ್ಥಾನ ತುಂಬುವ ಯೋಗ್ಯತೆ ಹೊಂದಿದ್ದಾರೆ.
ಈಗಾಗಲೇ ಕೆಲ ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವ ಅವರು ಆಯ್ಕೆ ಸಮಿತಿ ಮುಂದೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಹಾಗಾಗಿ ಈ ಆಟಗಾರನಿಗೆ ವಿಂಡೀಸ್ ವಿರುದ್ಧದ ಸರಣಿಯಲ್ಲೂ ಚಾನ್ಸ್ ನೀಡಬೇಕು ಅನ್ನೋದು ಕುಂಬ್ಳೆ ಅಭಿಮತ.
ಕೊಹ್ಲಿ ಜೊತೆ ಮಾಜಿ ಕೋಚ್ ಅನಿಲ್ ಕುಂಬ್ಳೆ (ಸಂಗ್ರಹ ಚಿತ್ರ) ಇನ್ನು, ರೋಹಿತ್ ಶರ್ಮಾ ಜೊತೆ ಕೆ.ಎಲ್. ರಾಹುಲ್ಗೆ ಇನ್ನಿಂಗ್ಸ್ ಆರಂಭಿಸಲು ಅವಕಾಶ ನೀಡಬೇಕು ಎಂದು ಹೇಳಿರುವ ಕುಂಬ್ಳೆ, ನಾಲ್ಕನೇ ಕ್ರಮಾಂಕವನ್ನು ಅಯ್ಯರ್ ತುಂಬಬಲ್ಲರು ಎಂದಿದ್ದಾರೆ.
ಭಾನುವಾರ ಚೆನ್ನೈನ ಎಂ.ಎ. ಚಿಂದಬರಂ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ.