ಕರ್ನಾಟಕ

karnataka

ETV Bharat / sports

ಶಂಕರ್​​​-ಜಾಧವ್​​​​ ಬದಲಿಗೆ ಜಡೇಜಾ-ಪಂತ್​ಗೆ ಅವಕಾಶ ನೀಡಿ: ಟೀಂ ಇಂಡಿಯಾ ಅಭಿಮಾನಿಗಳ ಮನವಿ - ಮನವಿ

ವಿಶ್ವಕಪ್​ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್​ನಲ್ಲಿ ವಿಫಲರಾಗಿರುವ ವಿಜಯ್​ ಶಂಕರ್​ ಬದಲಿಗೆ ಆಲ್​ರೌಂಡರ್​ ರವೀಂದ್ರ ಜಡೇಜಾಗೆ ಅವಕಾಶ ನೀಡುವಂತೆ ಭಾರತ ತಂಡದ ಅಭಿಮಾನಿಗಳು ಮನವಿ ಮಾಡಿದ್ದಾರೆ.

India vs West

By

Published : Jun 27, 2019, 8:20 PM IST

ಮ್ಯಾಂಚೆಸ್ಟರ್​:ಸತತ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್​ನಲ್ಲಿ ವಿಫಲರಾಗಿರುವ ವಿಜಯ್​ ಶಂಕರ್​ ಬದಲಿಗೆ ಆಲ್​ರೌಂಡರ್​ ರವೀಂದ್ರ ಜಡೇಜಾಗೆ ಅವಕಾಶ ನೀಡುವಂತೆ ಭಾರತ ತಂಡದ ಅಭಿಮಾನಿಗಳು ಮನವಿ ಮಾಡಿದ್ದಾರೆ.

ಆರಂಭಿಕ ಆಟಗಾರ ಧವನ್​ ಗಾಯಗೊಂಡ ಹಿನ್ನೆಲೆಯಲ್ಲಿ ತಂಡದಲ್ಲಿ ಅವಕಾಶ ಪಡೆದಿದ್ದ ವಿಜಯ್​ ಶಂಕರ್​ ನಾಲ್ಕನೇ ಕ್ರಮಾಂಕದಲ್ಲಿ ಸತತ ಮೂರು ಪಂದ್ಯಗಳಲ್ಲೂ 30ರ ಗಡಿ ದಾಟಿಲ್ಲ. ವೆಸ್ಟ್​ ಇಂಡೀಸ್​ ವಿರುದ್ಧ ವಿಫಲರಾಗುತ್ತಿದ್ದಂತೆ ವಿಜಯ್​ ವಿರುದ್ಧ ಕ್ರಿಕೆಟ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಜಡೇಜಾ ಅಥವಾ ಯುವ ಸ್ಫೋಟಕ ಬ್ಯಾಟ್ಸ್​ಮನ್​ ರಿಷಭ್​ ಪಂತ್​ಗೆ ಅವಕಾಶ ನೀಡಿ ಎನ್ನುತ್ತಿದ್ದಾರೆ.

ಜಡೇಜಾ ಇಂಗ್ಲೆಂಡ್​ ನೆಲದಲ್ಲಿ ಉತ್ತಮವಾಗಿ ಬೌಲಿಂಗ್​ ಮಾಡಿದ್ದು, 2013ರ ಚಾಂಪಿಯನ್​ ಟ್ರೋಫಿಯಲ್ಲಿ ಗರಿಷ್ಠ ವಿಕೆಟ್​ ಪಡೆದಿದ್ದರು. ಇನ್ನು ಪಂತ್​ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ವಿಜಯ್​ ಶಂಕರ್​ ಐಪಿಎಲ್ ಹಾಗೂ ಆಡಿರುವ ಏಕದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿಲ್ಲ.

ಹೀಗಾಗಿ ಅಭಿಮಾನಿಗಳು ಜಡೇಜಾ ಅಥವಾ ಪಂತ್​ಗೆ ಅವಕಾಶ ನೀಡಿ ಮಧ್ಯಮ ಕ್ರಮಾಂಕವನ್ನು ಬಲಪಡಿಸಬೇಕೆಂದು ಕೇಳಿಕೊಂಡಿದ್ದಾರೆ.

ABOUT THE AUTHOR

...view details