ಚೆನ್ನೈ: ಭಾರತ ತಂಡದಿಂದ ಇತ್ತೀಚೆಗೆ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಮುಂಬೈ ಆಲ್ರೌಂಡರ್ ಶಿವಂ ದುಬೆ ವಿಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ಗೆ ಪ್ರವೇಶ ಪಡೆದಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ 26 ವರ್ಷದ ದುಬೆ ಇಂದು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಏಕದಿನ ಕ್ರಿಕೆಟ್ಗೆ ಭಾರತದ 228ನೇ ಕ್ರಿಕೆಟಿಗನಾಗಿ ಪಾದಾರ್ಪಣೆ ಮಾಡಿದರು.