ಮುಂಬೈ: ಭಾರತ ತಂಡದ ಎಡಗೈ ಓಪನರ್ ಶಿಖರ್ ಧವನ್ ಏಕದಿನ ತಂಡದಿಂದಲೂ ಹೊರಗುಳಿಯುವ ಸಾಧ್ಯತೆಯಿದ್ದು, ಕನ್ನಡಿಗ ಕೆ.ಎಲ್.ರಾಹುಲ್ಗೆ ಏಕದಿನ ಸರಣಿಯಲ್ಲೂ ಆರಂಭಿಕನಾಗುವ ಅವಕಾಶ ಲಭಿಸಿದೆ.
ಏಕದಿನ ತಂಡಕ್ಕೂ ಶಿಖರ್ ಧವನ್ ಅಲಭ್ಯ... ಕೆ.ಎಲ್.ರಾಹುಲ್ಗೆ ಚಾನ್ಸ್?
ವರದಿಗಳ ಪ್ರಕಾರ ಶಿಖರ್ ಧವನ್ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ನಲ್ಲಿ ಪಾಲ್ಗೊಂಡಿದ್ದ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಗಾಯದಿಂದ ಸಂಪೂರ್ಣ ಚೇತರಿಕೆ ಕಂಡುಬಂದಿಲ್ಲವಾದ್ದರಿಂದ ಬಿಸಿಸಿಐ ವೈದ್ಯರ ತಂಡ ಇನ್ನು ಕೆಲವು ದಿನಗಳ ವಿಶ್ರಾಂತಿಗೆ ಸೂಚಿಸಿದೆ.

ಇದೀಗ ಧವನ್ ಜಾಗದಲ್ಲಿ ಟಿ-20 ಸರಣಿಯಲ್ಲಿ ಆರಂಭಿಕನಾಗಿರುವ ಕನ್ನಡಿಗ ಕೆ.ಎಲ್.ರಾಹುಲ್ ಏಕದಿನ ಸರಣಿಯಲ್ಲೂ ಆರಂಭಿಕನಾಗುವ ಸಾಧ್ಯತೆಯಿದೆ. ಇವರ ಜೊತೆಗೆ ಮತ್ತಷ್ಟು ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಬಿಸಿಸಿಐ ರಾಹುಲ್ರನ್ನೇ ಏಕದಿನ ಸರಣಿಯಲ್ಲಿ ಮುಂದುವರಿಸಲಿದೆಯಾ ಅಥವಾ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಮಯಾಂಕ್, ಯುವ ಆಟಗಾರ ಶುಬ್ಮನ್ ಗಿಲ್ಗೆ ಅವಕಾಶ ನೀಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.