ಕರ್ನಾಟಕ

karnataka

ETV Bharat / sports

ಡೆಬ್ಯು ಪಂದ್ಯದಲ್ಲೇ 140 ಕೆ.ಜಿ ಭಾರದ ರಖೀಮ್ ದಾಖಲೆ​​​​... ಪೂಜಾರಾ ವಿಕೆಟ್​ ಪಡೆದು ಸಂಭ್ರಮ! - ವೆಸ್ಟ್​ ಇಂಡೀಸ್ ಕ್ರಿಕೆಟ್​​

ಟೀಂ ಇಂಡಿಯಾ ವಿರುದ್ಧ ನಡೆಯುತ್ತಿರುವ ಫೈನಲ್​ ಟೆಸ್ಟ್​​ ಪಂದ್ಯದಲ್ಲಿ 140 ಕೆ.ಜಿ ಭಾರ, 6.6 ಎತ್ತರದ ವೆಸ್ಟ್‌ಇಂಡೀಸ್ ಆಲ್‌ರೌಂಡರ್ ರಖೀಮ್ ಕಾರ್ನ್‌ವಾಲ್ ನೂತನ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಡೆಬ್ಯು ಮಾಡಿರುವ ಪಂದ್ಯದಲ್ಲೇ ವಿಕೆಟ್​ ಪಡೆದಿದ್ದು, ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಅತಿ ಭಾರದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ರಖೀಮ್ ಕಾರ್ನ್‌ವಾಲ್

By

Published : Aug 30, 2019, 11:12 PM IST

ಜಮೈಕಾ:ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಫೈನಲ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡದ ಪರ ಕಣಕ್ಕಿಳಿದಿರುವ 6.6 ಅಡಿ ಎತ್ತರ ಹಾಗೂ 140 ಕೆ.ಜಿ ಭಾರದ ರಖೀಮ್ ಕಾರ್ನವಾಲ್​ ಹೊಸ ದಾಖಲೆ ಬರೆದಿದ್ದಾರೆ.

ಕಿಂಗ್‌ಸ್ಟನ್‌ನ ಸಬಿನಾ ಪಾರ್ಕ್‌ ಸ್ಟೇಡಿಯಂನಲ್ಲಿ ಪಂದ್ಯ ಆರಂಭಗೊಂಡಿದ್ದು, ಆಡುವ 11ರ ಬಳಗದಲ್ಲಿ ಚಾನ್ಸ್​ ಪಡೆದುಕೊಂಡು ಡೆಬ್ಯು ಮಾಡಿರುವ ಅತಿ ಭಾರದ ಕ್ರಿಕೆಟ್​ ಪ್ಲೇಯರ್​​ ರಖೀಮ್​ ಕಾರ್ನವಾಲ್​, ತಾವು ಎಸೆದ ಓವರ್​ನಲ್ಲಿ ಚೇತೇಶ್ವರ್​ ಪೂಜಾರಾ ವಿಕೆಟ್​ ಪಡೆದುಕೊಂಡು ಮಿಂಚಿದರು.

ರಖೀಮ್ ಕಾರ್ನ್‌ವಾಲ್ ಸಂಭ್ರಮ

ಇದರ ಜತೆಗೆ ಟೆಸ್ಟ್ ಕ್ರಿಕೆಟ್‌ಗೆ ಡೆಬ್ಯು ಮಾಡಿರುವ ಅತಿ ಭಾರದ ಆಟಗಾರ ಎಂಬ ಸಾಧನೆ ಮಾಡಿರುವ ಈ ಪ್ಲೇಯರ್​​ ಈ ಹಿಂದೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ವಾರ್ವಿಕ್ ಆರ್ಮ್‌ಸ್ಟ್ರಾಂಗ್ (139 ಕೆ.ಜಿ) ದಾಖಲೆ ಬ್ರೇಕ್​ ಮಾಡಿದ್ದಾರೆ.

ರಖೀಮ್ ಕಾರ್ನ್‌ವಾಲ್

ಈಗಾಗಲೇ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿ ಟೆಸ್ಟ್​ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಇದೀಗ ಎರಡನೇ ಪಂದ್ಯದಲ್ಲೂ ಗೆಲುವು ದಾಖಲು ಮಾಡಿ ಕ್ಲೀನ್​​ ಸ್ವೀಪ್​ ಮಾಡುವ ತವಕದಲ್ಲಿದೆ.

ABOUT THE AUTHOR

...view details