ಕಟಕ್:ವೇಗಿ ನವ್ದೀಪ್ ಸೈನಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಪ್ರಮುಖ ಎರಡು ವಿಕೆಟ್ ಪಡೆದು ವೃತ್ತಿ ಜೀವನದ ಆರಂಭವನ್ನು ಸ್ಮರಣೀಯವನ್ನಾಗಿಸಿಕೊಂಡಿದ್ದಾರೆ.
ಆಗಸ್ಟ್ 3 ರಂದು ಭಾರತದ ಟಿ20 ತಂಡದ ಪರ ಪದಾರ್ಪಣೆ ಮಾಡಿದ್ದ ನವ್ದೀಪ್ ಸೈನಿ ಇಂದು ನಡೆದ ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ 229 ಆಟಗಾರನಾಗಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಕಾಲಿಟ್ಟರು. ನಾಯಕ ವಿರಾಟ್ ಕೊಹ್ಲಿ ಕ್ಯಾಪ್ ನೀಡುವ ಮೂಲಕ ಏಕದಿನ ತಂಡಕ್ಕೆ ಯುವ ವೇಗಿಯನ್ನು ಬರ ಮಾಡಿಕೊಂಡರು.