ಫ್ಲೋರಿಡಾ: ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಯುವ ಬೌಲರ್ ನವ್ದೀಪ್ ಸೈನಿ ಪ್ರಚೋದನಕಾರಿ ವರ್ತನೆ ತೋರಿದ್ದಕ್ಕೆ ಐಸಿಸಿಯಿಂದ ಎಚ್ಚರಿಕೆ ಪಡೆದಿದ್ದು, ಒಂದು ಡೀಮೆರಿಟ್ ಅಂಕ ಪಡೆದಿದ್ದಾರೆ.
ಮೊದಲ ಪಂದ್ಯದಲ್ಲೇ ಮಿಂಚಿದ್ದ ಸೈನಿಗೆ ವಾರ್ನಿಂಗ್ ಮಾಡಿದ ಐಸಿಸಿ! - ವಿಂಡೀಸ್ ಪ್ರವಾಸ
ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಯುವ ಬೌಲರ್ ನವ್ದೀಪ್ ಸೈನಿ ಪ್ರಚೋಧನಕಾರಿ ವರ್ತನೆ ತೋರಿದ್ದಕ್ಕೆ ಐಸಿಸಿಯಿಂದ ಎಚ್ಚರಿಕೆ ಪಡೆದಿದ್ದು, ಒಂದು ಡೀಮೆರಿಟ್ ಅಂಕ ಪಡೆದಿದ್ದಾರೆ.
![ಮೊದಲ ಪಂದ್ಯದಲ್ಲೇ ಮಿಂಚಿದ್ದ ಸೈನಿಗೆ ವಾರ್ನಿಂಗ್ ಮಾಡಿದ ಐಸಿಸಿ!](https://etvbharatimages.akamaized.net/etvbharat/prod-images/768-512-4048841-511-4048841-1565006401928.jpg)
ಭಾರತ ತಂಡದ ಪರ ಮೊನ್ನೆಯಷ್ಟೇ ಪದಾರ್ಪಣೆ ಮಾಡಿದ ಸೈನಿ ತಮ್ಮ ಮೊದಲ ಪಂದ್ಯದಲ್ಲೇ 17 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಆದರೆ, ವಿಕೆಟ್ ಪಡೆದ ಖುಷಿಯಲ್ಲಿ ಅತಿಯಾಗಿ ವರ್ತಿಸಿದ್ದಕ್ಕೆ ಐಸಿಸಿಯಿಂದ ಎಚ್ಚರಿಕೆ ಪಡೆದಿದ್ದಾರೆ. ಇನ್ನಿಂಗ್ಸ್ನ 5ನೇ ಓವರ್‌ನಲ್ಲಿ ದಾಳಿಗಿಳಿದಿದ್ದ ಸೈನಿ 3ನೇ ಎಸೆತದಲ್ಲಿ ಪೂರನ್ರಿಂದ ಸಿಕ್ಸರ್ ಹೊಡಿಸಿಕೊಂಡರು. ಆದರೆ, ನಂತರದ ಎಸೆತದಲ್ಲಿ ಪೂರನ್ ವಿಕೆಟ್ ಪಡೆದ ಸೈನಿ ಬ್ಯಾಟ್ಸ್‌ಮನ್‌ಗೆ ಪ್ರಚೋದಿಸುವ ರೀತಿಯಲ್ಲಿ ಸಂಭ್ರಮಿಸಿದ್ದರು.
ಐಸಿಸಿಯ ನೀತಿ ಸಂಹಿತೆ ಆರ್ಟಿಕಲ್‌ನ 2.5ರ ನಿಯಮವನ್ನು ಸೈನಿ ತಮ್ಮ ವರ್ತನೆಯಿಂದ ಉಲ್ಲಂಘಿಸಿದ್ದಾರೆ. ಆದರೆ, ಇದೇ ಮೊದಲ ಹಂತದ ತಪ್ಪಾದ ಕಾರಣ ಸೈನಿಗೆ ಕೇವಲ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ದಂಡ ವಿಧಿಸಲಾಗಿಲ್ಲ. ಸೈನಿ ಮ್ಯಾಚ್ ರೆಫ್ರಿ ಜೆಫ್ ಕ್ರೋವ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಕೇವಲ ಒಂದು ಡೀಮೆರಿಟ್ ಅಂಕವನ್ನೂ ನೀಡಲಾಗಿದೆ. ಹೀಗಾಗಿ ಅಧಿಕೃತ ವಿಚಾರಣೆ ಏನೂ ನಡೆದಿಲ್ಲ ಎಂದು ತಿಳಿದು ಬಂದಿದೆ.