ಪೋರ್ಟ್ ಆಫ್ ಸ್ಪೈನ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿದ್ದು, 2 ನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಲು ಕೊಹ್ಲಿಪಡೆ ಕಾತರದಲ್ಲಿದೆ.
ಮೊದಲ ಮ್ಯಾಚ್‌ನಲ್ಲಿ ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ದುಕೊಂಡಿತ್ತು. ಆದರೆ ಮಳೆಯ ಕಾರಣ 13 ಓವರ್ಗಳ ಆಟ ಮಾತ್ರ ನಡೆದಿತ್ತು. ಕ್ರಿಸ್ ಗೇಲ್ 31 ಎಸೆತಗಳನ್ನೆದುರಿಸಿ ಕೇವಲ 4 ರನ್ಗಳಿಸಿ ಔಟಾಗಿದ್ದರು. ಆದರೆ ಲೆವಿಸ್ ಮಾತ್ರ 36 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 40 ರನ್ ಗಳಿಸಿದ್ದರು. ಕುಲ್ದೀಪ್, ಗೇಲ್ ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.
ವೇಗದ ಬೌಲರ್ಗಳಾದ ಭುವನೇಶ್ವರ್ ಹಾಗೂ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದ್ದರು. ಭುವಿ 4 ಓವರ್ಗಳಲ್ಲಿ 11 ರನ್ನು ನೀಡಿದ್ರೆ, ಶಮಿ 3 ಓವರ್ಗಳಲ್ಲಿ 5 ರನ್ ಕೊಟ್ಟಿದ್ದರು. ಆದರೆ ಮತ್ತೊಬ್ಬ ಯುವ ವೇಗಿ ಖಲೀಲ್ ಅಹ್ಮದ್ 3 ಓವರ್ಗಳಲ್ಲಿ 27 ರನ್ ನೀಡಿ ದುಬಾರಿಯಾಗಿದ್ದರು. ಇಂದಿನ ಪಂದ್ಯದಲ್ಲಿ ಟಿ20 ಸರಣಿಯಲ್ಲಿ ಮಿಂಚಿದ್ದ ನವದೀಪ್ ಸೈನಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯಾಗುವ ಲಕ್ಷಣವಿಲ್ಲ. ಶಿಖರ್ ಧವನ್ ತಂಡ ಸೇರಿಕೊಂಡಿದ್ದು, ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಿದ್ರೆ, ಪಂತ್ 5, ಜಾಧವ್ 6 ಜಡೇಜಾ 7ನೇ ಕ್ರಮಾಂಕದಲ್ಲಿ ಮುಂದುರಿಯಲಿದ್ದಾರೆ.