ಕಟಕ್(ಒಡಿಶಾ):ವೆಸ್ಟ್ ವಿಂಡೀಸ್ ವಿರುದ್ಧ ಸತತ 10ನೇ ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಭಾರತ ತಂಡ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಮೊದಲ ಪಂದ್ಯ ಸೋತರೂ ಎರಡನೇ ಪಂದ್ಯದಲ್ಲಿ ಪುಟಿದೆದ್ದ ಭಾರತ 107 ರನ್ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1ರಲ್ಲಿ ಸಮಲ ಸಾಧಿಸಿತ್ತು. ಇಂದು ಕಪ್ ಗೆಲ್ಲಲು ಮುಖ್ಯವಾಗಿರುವ ಪಂದ್ಯದಲ್ಲಿ ಒಂದು ಬದಲಾವಣೆಯೊಂದಿಗೆ ಟೀಂ ಕಣಕ್ಕಿಳಿಯುತ್ತಿದೆ. ಬೆನ್ನು ನೋವಿಗೆ ತುತ್ತಾಗಿರುವ ದೀಪಕ್ ಚಹಾರ್ ಬದಲು ಯುವ ಬೌಲರ್ ನವ್ದೀಪ್ ಸೈನಿ ತಂಡ ಸೇರಿದ್ದು, ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಎರಡನೇ ಏಕದಿನ ಪಂದ್ಯವಾಡಿದ ತಂಡವನ್ನೇ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಸಿದೆ.
ಬಾರಬತಿಯಲ್ಲಿ 15 ವರ್ಷಗಳಿಂದ ಸೋಲೇ ಕಾಣದ ಭಾರತ
ಭಾರತ ತಂಡ ಕಟಕ್ನ ಬಾರಬತಿ ಸ್ಟೇಡಿಯಂನಲ್ಲಿ ಆಡಿರುವ 18 ಪಂದ್ಯಗಳಲ್ಲಿ 12 ಗೆಲುವು ಸಾಧಿಸಿದೆ. ಕೇವಲ 6 ಪಂದ್ಯಗಳಲ್ಲಿ ಸೋಲು ಕಂಡಿದೆ. ಅದರಲ್ಲೂ 2004ರಿಂದ ಈ ಕ್ರೀಡಾಂಗಣದಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಇಲ್ಲಿ ಕೊಹ್ಲಿ ಬಳಗವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.