ಆ್ಯಂಟಿಗುವಾ: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಅಂತೂ ಎರಡು ವರ್ಷಗಳ ಬಳಿಕ ಶತಕ ದಾಖಲಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಅಜಿಂಕ್ಯಾ ರಹಾನೆ ಭರ್ಜರಿ ಶತಕ ಸಿಡಿಸಿ ಭಾರತ ತಂಡದ ತಾಳ್ಮೆಯುತ ಆಟಗಾರನಾಗಿರುವ ರಹಾನೆ ಮೊದಲ ಇನ್ನಿಂಗ್ಸ್ನಲ್ಲಿ 81 ರನ್ ಗಳಿಸಿದ್ದರು. ಎರಡನೇ ಇನ್ನಿಂಗಸ್ನಲ್ಲೂ ಉತ್ತಮ ಪ್ರದರ್ಶನ ತೋರಿದ ಅವರು ತಮ್ಮ 10ನೇ ಶತಕ ಸಿಡಿಸಿದರು.
ಮೊದಲ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಬದಲು ರಹಾನೆ ಆಯ್ಕೆ ಮಾಡಿದ್ದಕ್ಕೆ ಸಾಮಾಜಿಕ ಜಾಲಾತಾಣಗಳಲ್ಲಿ ಕೊಹ್ಲಿ ಹಾಗೂ ಶಾಸ್ತ್ರಿ ಟೀಕೆಗೆ ಗುರಿಯಾಗಿದ್ದರು. ಆದರೆ, ರೋಹಿತ್ ಜಾಗದಲ್ಲಿ ಆಯ್ಕೆಯಾಗಿದ್ದ ರಹಾನೆ ಶತಕ ಸಿಡಿಸಿದರೆ, ಮತ್ತೊಬ್ಬ ಬ್ಯಾಟ್ಸ್ಮನ್ ಹನುಮ ವಿಹಾರಿ 93 ರನ್ಗಳಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಹಾನೆ ಕಳೆದ 29 ಇನ್ನಿಂಗ್ಸ್ನಲ್ಲಿ ಶತಕದ ಬರ ಎದುರಿಸಿದ್ದರು.ಕೊನೆಯ ಬಾರಿ ರಹಾನೆ 2017ರಲ್ಲಿ ಶ್ರೀಲಂಕಾ ವಿರುದ್ಧ ಶತಕಗಳಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಕೇವಲ 27 ಇನ್ನಿಂಗ್ಸ್ಗಳಲ್ಲಿ ಕೇವಲ 4 ಅರ್ಧಶತಕ ಸಿಡಿಸಿ ನಿರಾಶೆ ಮೂಡಿಸಿದ್ದಾರೆ.