ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಅಲ್​ರೌಂಡ್​ ಪ್ರದರ್ಶನ: ಲಂಕಾ ವಿರುದ್ಧ ಟಿ-20 ಸರಣಿ ವಶ - India vs Sri Lanka T20

ಭಾರತ ಮತ್ತು ಶ್ರೀಲಂಕಾ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 78 ರನ್​ಗಳಿಂದ ಜಯ ದಾಖಲಿಸಿ ಸರಣಿ ವಶಪಡಿಸಿಕೊಂಡಿದೆ.

India won by 78 runs,ಲಂಕಾ ವಿರುದ್ಧ ಟಿ-20 ಸರಣಿ ವಶ
ಲಂಕಾ ವಿರುದ್ಧ ಟಿ-20 ಸರಣಿ ವಶ

By

Published : Jan 10, 2020, 8:53 PM IST

Updated : Jan 10, 2020, 10:27 PM IST

ಪುಣೆ:ಪ್ರವಾಸಿ ಶ್ರೀಲಂಕಾ ವಿರುದ್ಧ ಆಲ್​ರೌಂಡ್​ ಪ್ರದರ್ಶನ ತೋರಿದ ಕೊಹ್ಲಿ ಹುಡುಗರು ಅಂತಿಮ ಟಿ20 ಪಂದ್ಯದಲ್ಲಿ 78 ರನ್​ಗಳ ಗೆಲುವು ದಾಖಲಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನ 2-0 ಅಂತರದಲ್ಲಿ ಗೆದ್ದುಕೊಂಡಿದೆ.

ಟೀಂ ಇಂಡಿಯಾ ನೀಡಿದ್ದ 202 ರನ್​ಗಳ ಬೃಹತ್ ಟಾರ್ಗೆಟ್​ ಬೆನ್ನತ್ತಿದ ಮಲಿಂಗಾ ಪಡೆಗೆ ಬುಮ್ರಾ ಮತ್ತು ಶಾರ್ದೂಲ್ ಠಾಕೂರ್ ಶಾಕ್ ನೀಡಿದ್ರು. ಮೊದಲ 2 ಓವರ್​ಗಳಲ್ಲೆ ಆರಂಭಿಕ ಆಟಗಾರರಾದ ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ ಪೆವಿಲಿಯನ್ ಸೇರಿಕೊಂಡ್ರು.

ನಂತರ ಬಂದ ಕುಶಾಲ್ ಪೆರೆರಾ, ಓಷಾಡ ಫರ್ನಾಂಡೊ ಕೂಡ ಒಂದಂಕಿಗೆ ಔಟ್​ ಆದ್ರು. ನಂತರ ಜೊತೆಯಾದ ಏಂಜೆಲೋ ಮ್ಯಾಥ್ಯೂಸ್, ಧನಂಜಯ್ ಡಿಸಿಲ್ವಾ ಲಂಕಾಗೆ ಗೆಲುವಿನ ಆಸೆ ಚಿಗುರಿಸದರು. ಆದರೆ ಏಂಜೆಲೋ ಮ್ಯಾಥ್ಯೂಸ್ ಔಟ್​ ಆಗುವ ಮೂಲಕ ಲಂಕಾ ಪಡೆಯ ಪತನ ಶುರುವಾಯ್ತು. ಉತ್ತಮವಾಗಿ ಬ್ಯಾಟ್ ಬೀಸಿದ ಧನಂಜಯ್ ಡಿಸಿಲ್ವಾ ಆರ್ಧ ಶತಕ ಸಿಡಿಸಿದ್ರು. ಟೀಂ ಇಂಡಿಯಾ ಬೌಲರ್​ಗಳ ಕರಾರುವಕ್ಕು ದಾಳಿಗೆ ಯಾವೊಬ್ಬ ಆಟಗಾರರು ಕೂಡ ಹೆಚ್ಚು ಕಾಲ ಕ್ರೀಸ್ ಕಚ್ಚಿ ನಿಲ್ಲಲಿಲ್ಲ.

ಅಂತಿಮವಾಗಿ ಲಂಕಾ ಪಡೆ 15.5 ಓವರ್​ಗಳಲ್ಲಿ 123 ರನ್​ಗಳಿಸಿ, 78ರನ್​ಗಳಿಂದ ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ ಪರ ನವದೀಪ್ ಸೈನಿ 3, ಶಾರ್ದೂಲ್ ಠಾಕೂರ್ 2 , ವಾಷಿಂಗ್ಟನ್ ಸುಂದರ್ 2 ಮತ್ತು ಬುಮ್ರಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್​ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರಕಿತು. ಆರಂಭಿಕ ಆಟಗಾರರಾದ ಕೆ.ಎಲ್​.ರಾಹುಲ್​ ಮತ್ತು ಶಿಖರ್ ಧವನ್​ ಸ್ಪೋಟಕ ಬ್ಯಾಟಿಂಗ್​ ನಡೆಸಿದ್ರು. ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಧವನ್ ನಂತರ ತಮ್ಮ ಬ್ಯಾಟಿಂಗ್ ವೇಗ ಹೆಚ್ಚಿಸಿ ಬಿರುಸಿನ ಹೊಡೆತಕ್ಕೆ ಮುಂದಾದ್ರು. ಧವನ್ 34 ಎಸೆತದಲ್ಲಿ 7 ಬೌಂಡರ್ 1 ಸಿಕ್ಸರ್​​ ನೆರವಿನಿಂದ ಅರ್ಧಶತಕ ಸಿಡಿಸಿ ಒಟ್ಟು 52 ರನ್​ಗಳಿಸಿ ಔಟಾದ್ರು.

ಹಲವು ಸರಣಿಗಳಲ್ಲಿ ಬೆಂಚ್​ ಕಾದು ಸಾಕಾಗಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಂಡು​ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದ್ರು. ಎದುರಿಸಿದ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಸಿಡಿಸಿದ ಅವರು ಅಬ್ಬರಿಸುವ ಮುನ್ಸೂಚನೆ ನೀಡಿದ್ರು. ಅದರೆ ಅದೇ ಓವರ್‌ನ ಎರಡನೇ ಎಸೆತದಲ್ಲೇ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದು ನಿರಾಸೆ ಅನುಭವಿಸಿದ್ರು.

ಆರಂಭದಿಂದಲೂ ಅಬ್ಬರಿಸಿದ ಕೆ.ಎಲ್. ರಾಹುಲ್ 34 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ರು. 54 ರನ್​ ಗಳಿಸಿರುವಾಗ ಲಕ್ಷನ್ ಸಂದಕನ್ ಬೌಲಿಂಗ್​ನಲ್ಲಿ ಸ್ಟಂಪ್​ಗೆ ಬಲಿಯಾದ್ರು. ಭರವಸೆಯ ಆಟಗಾರ ಶ್ರೇಯಸ್​ ಐಯ್ಯರ್​ ಕೂಡ 4 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಜೊತೆಯಾದ ಕನ್ನಡಿಗ ಮನಿಶ್ ಪಾಂಡೆ ಮತ್ತು ನಾಯಕ ವಿರಾಟ್ ಕೊಹ್ಲಿ ಲಂಕಾ ಬೌಲರ್​ಗಳ ಬೆವರಿಳಿಸಿದ್ರು. 5 ನೇ ವಿಕೆಟ್​ಗೆ ಈ ಜೋಡಿ 41 ರನ್​ಗಳ ಉತ್ತಮ ಜೊತೆಯಾಟವಾಡಿದ್ರು.

ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ವಿರಾಟ್ ಕೊಹ್ಲಿ 17 ಎಸೆತಗಳಲ್ಲಿ 26 ರನ್​ ಗಳಿಸಿರುವಾಗ ಇಲ್ಲದ ರನ್ ಕದಿಯಲು ಹೋಗಿ ರನೌಟ್​ಗೆ ಬಲಿಯಾದ್ರು. ನಂತರ ಬಂದ ವಾಷಿಂಗ್ಟನ್ ಸುಂದರ್ ಸೊನ್ನೆ ಸುತ್ತಿದ್ರು.

ಅಂತಿಮ ಓವರ್​ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮನೀಶ್ ಪಾಂಡೆ(31) ಮತ್ತು ಶಾರ್ದೂಲ್ ಠಾಕೂರ್ (22) ಜೋಡಿ ಭಾರತದಮೊತ್ತ ಹೆಚ್ಚಿದ್ರು. ನಿಗದಿತ 20 ಓವರ್​ಗಳಲ್ಲಿ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 201ರನ್​ ಗಳಿಸಿತು. ಲಂಕಾ ಪರ ಲಕ್ಷನ್ ಸಂದಕನ್ 3 ವಿಕೆಟ್ ಪಡೆದು ಮಿಂಚಿದ್ರು.

Last Updated : Jan 10, 2020, 10:27 PM IST

ABOUT THE AUTHOR

...view details