ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 202 ರನ್ಗಳಿಂದ ಐತಿಹಾಸಿಕ ಗೆಲುವು ದಾಖಲಿಸಿದೆ.
ದ. ಆಫ್ರಿಕಾ ವಿರುದ್ಧದ ಮೂರೂ ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಕ್ಲೀನ್ಸ್ವೀಪ್ ಮಾಡಿದೆ. 162 ರನ್ನಿಗೆ ಆಲ್ಔಟ್ ಆಗಿದ್ದ ಹರಿಣಗಳ ಮೇಲೆ ಕೊಹ್ಲಿ ಫಾಲೋ-ಆನ್ ಹೇರಿದ್ದರು. ಆದ್ರೆ, ಆಫ್ರಿಕನ್ನರುಮೂರನೇ ದಿನದಾಟದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ್ರು.
ಇಂದಿನ ದಿನದ ಆರಂಭದಲ್ಲೇ ಕೊನೆಯ ಎರಡು ವಿಕೆಟ್ ಕಳೆದುಕೊಂಡು ದ.ಆಫ್ರಿಕಾ ಸೋಲೊಪ್ಪಿಕೊಂಡಿದೆ. ಎರಡೂ ವಿಕೆಟ್ ಚೊಚ್ಚಲ ಪಂದ್ಯವಾಡುತ್ತಿರುವ ನದೀಮ್ ಪಾಲಾಗಿದೆ.
ಟೀಂ ಇಂಡಿಯಾ ಬೃಹತ್ ಮೊತ್ತ:
ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ದ್ವಿಶತಕ(212), ರಹಾನೆ ಶತಕ(115) ಜಡೇಜಾ ಅರ್ಧಶತಕ(51) ಹಾಗೂ ಕೊನೆಯಲ್ಲಿ 10 ಎಸೆತಕ್ಕೆ ಅಬ್ಬರದ 31 ರನ್ ಸಿಡಿಸಿದ ಪರಿಣಾಮ 9 ವಿಕೆಟ್ ನಷ್ಟಕ್ಕೆ ತಂಡ 497 ರನ್ ಗಳಿಸಿತ್ತು.
ಇದಕುತ್ತರವಾಗಿ ಬ್ಯಾಟಿಂಗ್ ಶುರುಮಾಡಿದ ಆಫ್ರಿಕನ್ ಪಡೆ ಯಾವುದೇ ರೀತಿಯಲ್ಲೂ ಪ್ರಬಲ ಪ್ರತಿರೋಧ ತೋರಲಿಲ್ಲ. ಚೊಚ್ಚಲ ಪಂದ್ಯವಾಡಿದ ಝಬೈರ್ ಹಂಝ 62 ರನ್ ಗಳಿಸಿದ್ದು ಬಿಟ್ರೆ ಉಳಿದ ಆಟಗಾರರ ಬ್ಯಾಟ್‌ನಿಂದ ರನ್ ಹರಿದು ಬರಲೇ ಇಲ್ಲ. ಭಾರತೀಯ ಬೌಲರ್ಗಳ ಮಿಂಚಿನ ದಾಳಿಗೆ ಫ್ಲೆಸಿಸ್ ಪಡೆ 162 ರನ್ನಿಗೆ ಸರ್ವಪತನವಾಯಿತು.
ಫಾಲೋ-ಆನ್ ಹೇರಿದ ಕೊಹ್ಲಿ:
ಬರೋಬ್ಬರಿ 335 ರನ್ಗಳ ಹಿನ್ನಡೆ ಸಾಧಿಸಿದ ಪ್ರವಾಸಿ ತಂಡದ ಮೇಲೆ ಟೀಂ ಇಂಡಿಯಾ ಕಪ್ತಾನ ಫಾಲೋ-ಆನ್ ಹೇರಿದ್ದರು. ಆದರೆ ಎರಡನೇ ಇನ್ನಿಂಗ್ಸ್ ಮತ್ತಷ್ಟು ಕಳಪೆ ಆಟವಾಡಿದ ಫ್ಲೆಸಿಸ್ ಪಡೆ ಮೂರನೇ ದಿನದಂತ್ಯಕ್ಕೆ ಸೋಲಿನತ್ತ ಮುಖ ಮಾಡಿತ್ತು.
ಕೊಹ್ಲಿ ನಾಯಕತ್ವದಲ್ಲಿ ಅಪರೂಪದ ದಾಖಲೆ... ಅಜರುದ್ದೀನ್, ಗಂಗೂಲಿ ಹಿಂದಿಕ್ಕಿದ ದಾಖಲೆ ಶೂರ
132 ರನ್ನಿಗೆ 8 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟ ಮುಗಿಸಿದ್ದ ಆಫ್ರಿಕನ್ನರು ಇಂದು ಎರಡೇ ಓವರ್ನಲ್ಲಿ ಆಲ್ಔಟ್ ಆದರು.
ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 3, ಉಮೇಶ್ ಯಾದವ್ ಹಾಗೂ ಶಹಬಾಜ್ ನದೀಮ್ ತಲಾ 2 ವಿಕೆಟ್ ಹಂಚಿಕೊಂಡರು.ಅಶ್ವಿನ್ ಹಾಗೂ ಜಡೇಜಾ ಒಂದು ವಿಕೆಟ್ ಪಡೆದರು.