ಪುಣೆ:ವಿರಾಟ್ ಕೊಹ್ಲಿ ದ್ವಿಶತಕ ಬಾರಿಸಿದ್ದು, 7 ಸಾವಿರ ರನ್ಗಳನ್ನು ಪೂರೈಸಿದ್ದಾರೆ. ಭಾರತದ ಆಟಗಾರರ ಪೈಕಿ ಅತಿ ವೇಗವಾಗಿ 7 ಸಾವಿರ ರನ್ ಪೂರೈಸಿದ ಸಾಧನೆ ಕೂಡಾ ಮಾಡಿದ್ದಾರೆ.
ಮೊದಲ ದಿನದಾಟದಲ್ಲಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಶತಕ(108) ಹಾಗೂ ಚೇತೇಶ್ವರ ಪುಜಾರ(58), ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿ ತಂಡವನ್ನು ಉತ್ತಮ ಹಂತಕ್ಕೆ ಕೊಂಡೊಯ್ದಿದ್ದರು.
ಎರಡನೇ ದಿನದಾಟದಲ್ಲಿ ಕೊಹ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿ ಹತ್ತು ಇನ್ನಿಂಗ್ಸ್ ಬಳಿಕ ಮೂರಂಕಿ ಗಡಿಮುಟ್ಟಿ ಸಂಭ್ರಮಿಸಿದರು. ವಿಶೇಷವೆಂದರೆ ಇದು ಕೊಹ್ಲಿಯ ಈ ವರ್ಷದ ಮೊದಲ ಟೆಸ್ಟ್ ಶತವೂ ಇದಾಗಿದೆ.
ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಅಜಿಂಕ್ಯ ರಹಾನೆ ಅರ್ಧಶತಕ(59) ಗಳಿಸಿ ನಿರ್ಗಮಿಸಿದರು. ಭೋಜನ ವಿರಾಮದ ಬಳಿಕವೂ ಉತ್ತಮ ಬ್ಯಾಟಿಂಗ್ ನಡೆಸುತ್ತಿರುವ ಕೊಹ್ಲಿ 200ರ ಗಡಿ ದಾಟಿದ್ದು, ದ್ವಿಶತಕ ಪೂರೈಸಿದ್ದಾರೆ..