ಕರ್ನಾಟಕ

karnataka

ETV Bharat / sports

ಸಿಕ್ಸರ್​ ಕಿಂಗ್​ ಎಂಬುದು ಟೆಸ್ಟ್​ನಲ್ಲೂ ಸಾಬೀತು ಮಾಡಿದ ರೋಹಿತ್​ ಶರ್ಮಾ!

ಮೊದಲ ಇನ್ನಿಂಗ್ಸ್​ನಲ್ಲಿ 6 ಸಿಕ್ಸರ್​ ಸಿಡಿಸಿದ್ದ ರೋಹಿತ್​ ಶರ್ಮಾ ಎರಡನೇ ಇನ್ನಿಂಗ್ಸ್​ನಲ್ಲಿ 3ನೇ ಸಿಕ್ಸರ್​ ಸಿಡಿಸುತ್ತಿದ್ದಂತೆ ಭಾರತದ ಪರ ಒಂದೇ ಟೆಸ್ಟ್​ ಪಂದ್ಯದಲ್ಲಿ ಹೆಚ್ಚು ಸಿಕ್ಸರ್​ಸಿಡಿಸಿದ ದಾಖಲೆಗೆ ಪಾತ್ರರಾದರು.

ರೋಹಿತ್​ ಶರ್ಮಾ

By

Published : Oct 5, 2019, 1:43 PM IST

ವಿಶಾಖಪಟ್ಟಣ:ಭಾರತ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್​ಮನ್ ರೋಹಿತ್​ ಶರ್ಮಾ ತಮ್ಮ ಅಬ್ಬರದ ಬ್ಯಾಟಿಂಗ್​ ಅನ್ನು ಟೆಸ್ಟ್​ ಕ್ರಿಕೆಟ್​ನಲ್ಲೂ ಮುಂದುವರಿಸಿದ್ದು ಟೆಸ್ಟ್​ ಪಂದ್ಯದಲ್ಲಿ ಅಧಿಕ ಸಿಕ್ಸರ್​ ಸಿಡಿಸಿದ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ,

ಮೊದಲ ಇನ್ನಿಂಗ್ಸ್​ನಲ್ಲಿ 6 ಸಿಕ್ಸರ್​ ಸಿಡಿಸಿದ್ದ ರೋಹಿತ್​ ಶರ್ಮಾ ಎರಡನೇ ಇನ್ನಿಂಗ್ಸ್​ನಲ್ಲಿ 3ನೇ ಸಿಕ್ಸರ್​ ಸಿಡಿಸುತ್ತಿದ್ದಂತೆ ಈ ಮಹತ್ವದ ದಾಖಲೆಗೆ ಪಾತ್ರರಾದರು. ರೋಹಿತ್​ಗಿಂತ ಮೊದಲು ಮಾಜಿ ಕ್ರಿಕೆಟಿಗ ನವಜೋತ್​ ಸಿಂಗ್​ ಸಿಧು 8 ಸಿಕ್ಸರ್​ ಸಿಡಿಸಿದ್ದರು.

ಇದಲ್ಲದೆ ರೋಹಿತ್​ ಶರ್ಮಾ ಮೂರು ಮಾದರಿಯ ಕ್ರಿಕೆಟ್​ನ ಇನ್ನಿಂಗ್ಸ್​ಗಳಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿರುವ ಭಾರತೀಯ ಎನಿಸಿಕೊಂಡಿದ್ದಾರೆ. ಹಿಟ್​ಮ್ಯಾನ್​ ಏಕದಿನ ಕ್ರಿಕೆಟ್​ನಲ್ಲಿ 16 ಸಿಕ್ಸರ್, ಟಿ-20 ಕ್ರಿಕೆಟ್​ನಲ್ಲಿ 10 ಸಿಕ್ಸರ್​ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 9* ಸಿಕ್ಸರ್​ ಸಿಡಿಸಿದ್ದಾರೆ.

ರೋಹಿತ್​ ಹಾಗೂ ಮಯಾಂಕ್​ ಅಬ್ಬರದ ಆಟದ ನೆರವಿನಿಂದ ಭಾರತ ತವರಿನ ಟೆಸ್ಟ್​ ಪಂದ್ಯವೊಂದರಲ್ಲಿ ಹೆಚ್ಚು ಸಿಕ್ಸರ್(21)​ ದಾಖಲಿಸಿದೆ. ಈ ಹಿಂದೆ 2009/10ರಲ್ಲಿ ಶ್ರೀಲಂಕಾ ವಿರುದ್ಧ 20 ಹಾಗೂ 2017ರಲ್ಲಿ ವಿಂಡೀಸ್​ ವಿರುದ್ಧ 20 ಸಿಕ್ಸರ್ ಭಾರತೀಯ ಬ್ಯಾಟ್ಸ್​ಮನ್​ಗಳಿಂದ ಸಿಡಿಸಿದ್ದವು.

ABOUT THE AUTHOR

...view details