ವಿಶಾಖ ಪಟ್ಟಣ: ಅತಿಥೇಯ ಭಾರತ ತಂಡ ನೀಡಿದ 395ರನ್ಗಳ ಟಾರ್ಗೆಟ್ ಬೆನ್ನೆತ್ತಿರುವ ದಕ್ಷಿಣ ಆಫ್ರಿಕಾ ತಂಡ 9 ಆರಂಭದಲ್ಲೇ ಮೊದಲ ಇನ್ನಿಂಗ್ಸ್ನ ಶತಕ ವೀರ ಡೀನ್ ಎಲ್ಗರ್ ವಿಕೆಟ್ ಕಳೆದುಕೊಂಡಿತು.
75 ರನ್ಗಳ ಮುನ್ನಡೆಯೊಂದಿಗೆ ವೇಗವಾಗಿ 323 ರನ್ ಕಲೆಹಾಕಿದ ಕೊಹ್ಲಿ ಬಳಗ 395 ರನ್ಗಳ ಕಠಿಣ ಸವಾಲು ನೀಡಿತು. ಈ ಮೊತ್ತವನ್ನು ಬೆನ್ನತ್ತಿದ ಪ್ಲೆಸಿಸ್ ಬಳಗಕ್ಕೆ ರವೀಂದ್ರ ಜಡೇಜಾ ಆರಂಭದಲ್ಲೇ ಆಘಾತ ನೀಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 160 ರನ್ ಸಿಡಿಸಿದ್ದ ಡೀನ್ ಎಲ್ಗರ್(2)ರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ.
ಬಾರತಕ್ಕೆ ಗೆಲ್ಲುಲು ಇನ್ನೊಂದು ಒಂದುದಿನ ಆಟ ಬಾಕಿ ಉಳಿದಿದ್ದು 98 ಓವರ್ಗಳಲ್ಲಿ 9 ವಿಕೆಟ್ಗಳ ಅವಶ್ಯಕತೆಯಿದೆ. ಸ್ಪಿನ್ ಸ್ನೇಹಿ ಪಿಚ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲ್ಲುವುದು ಅಸಾಧ್ಯವಾಗಿದ್ದು ಡ್ರಾಗಾಗಿ ತೃಪ್ತಿ ಪಡಬೇಕಿದೆ.
ರೋಹಿತ್ ಆಕರ್ಷಕ ಶತಕ, ಮಿಂಚಿದ ಪೂಜಾರ, ಜಡೇಜಾ
ಶುಕ್ರವಾರ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡಿದ್ದ ಇಂದು ದಕ್ಷಿಣ ಆಫ್ರಿಕ ಆಟ ಮುಂದುವರಿಸಿ 431 ರನ್ಗಳಿಗೆ ಆಲೌಟ್ ಆಯಿತು. 75 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಆರಂಭದಲ್ಲೆ ಅಗರ್ವಾಲ್(7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ರೋಹಿತ್-ಪೂಜಾರ ಜೋಡಿ ಸ್ವಲ್ಪ ಸಮಯ ನಿಧಾನಗತಿ ಆಟಕ್ಕೆ ಮೊರೆ ಹೋದರಾದರು ನಂತರ ಅಬ್ಬರಿಸಿ 2ನೇ ವಿಕೆಟ್ಗೆ 169 ರನ್ಗಳನ್ನು ಸೇರಿಸಿರು. ಪೂಜಾರ 81 ರನ್ಗಳಿಸಿ ಔಟಾರು.
ಆದರೆ ರೋಹಿತ್ ಮಾತ್ರ ತಮ್ಮ ಅಬ್ಬರ ಆಟ ಮುಂದುವರಿಸಿದರು. 133 ಎಸೆತಗಳಲ್ಲಿ ವಿಶ್ವದಾಖಲೆಯ ಶತಕ ಪೂರೈಸಿದ ರೋಹಿತ್ ಒಟ್ಟಾರೆ 149 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 10 ಬೌಂಡರಿ ನೆರವಿನಿಂದ 127 ರನ್ಗಳಿಸಿ ಕೇಶವ್ ಮಹಾರಾಜಗೆ ವಿಕೆಟ್ ಒಪ್ಪಿಸಿದರು.
ಇವರ ಜೊತೆಗೆ ಸ್ಫೋಟಕ ಆಟ ಪ್ರದರ್ಶಿಸಿದ ಜಡೇಜಾ 32 ಎಸೆಗಳಲ್ಲಿ 3 ಸಿಕ್ಸರ್ ಸಹಿತ 40 ರನ್, ಕೊಹ್ಲಿ 25 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್ ಸಹಿತ 31, ರಹಾನೆ 17 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 27 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
ದ. ಆಫ್ರಿಕಾ ಪರ ಕೇಶವ್ ಮಹಾರಾಜ್ 2, ಪಿಲಾಂಡರ್ ಹಾಗೂ ರಬಡಾ ಒಂದು ವಿಕೆಟ್ ಪಡೆದರು.