ಕರ್ನಾಟಕ

karnataka

ETV Bharat / sports

ಸೈನಿಕರ ಗೌರವಾರ್ಥ.. ಟೆಸ್ಟ್​ ಪಂದ್ಯದ 5 ಸಾವಿರ ಟಿಕೆಟ್​ಗಳನ್ನ​ ಉಚಿತವಾಗಿ ನೀಡಿದ ಜೆಎಸ್​ಸಿಎ! - ಭಾರತ ದಕ್ಷಿಣ ಆಫ್ರಿಕಾ ಟೆಸ್ಟ್​ ಅಂತಿಮ ಟೆಸ್ಟ್​

ಭಾರತೀಯ ಸೇನೆ ಮತ್ತು ಪೊಲೀಸ್​ ಸಿಬ್ಬಂದಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್​ ಕ್ರಿಕೆಟ್​ ಪಂದ್ಯದ 5 ಸಾವಿರ ಟಿಕೆಟ್​ಗಳನ್ನ ಉಚಿತವಾಗಿ ನೀಡಲಾಗಿದೆ.

ಜೆಎಸ್​ಸಿಎ ಮೈದಾನ

By

Published : Oct 18, 2019, 10:00 PM IST

ರಾಂಚಿ: ಜಾರ್ಖಂಡ್ ರಾಜ್ಯ ಕ್ರಿಕೆಟ್​​ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದ 5 ಸಾವಿರ ಟಿಕೆಟ್​ಗಳನ್ನ ಉಚಿತವಾಗಿ ನೀಡಲಾಗಿದೆ.

ಭಾರತೀಯ ಸೈನಿಕರಿಗೆ ಗೌರವ ನೀಡುವ ಸಲುವಾಗಿ ​ಜಾರ್ಖಂಡ್ ರಾಜ್ಯ ಕ್ರಿಕೆಟ್​​ ಅಸೋಸಿಯೇಷನ್ ಇಂತಹದ್ದೊಂದು ಕಾರ್ಯಕ್ಕೆ ಮುಂದಾಗಿದೆ. 5000 ಟಿಕೆಟ್‌ಗಳನ್ನು ಪ್ಯಾರಾ ಮಿಲಿಟರಿ ಪಡೆ, ಭಾರತೀಯ ಸೇನೆ, ಸ್ಥಳೀಯ ಪೊಲೀಸರಿಗೆ ವಿತರಿಸಲಾಗಿದೆ ಎಂದು ಜೆಎಸ್‌ಸಿಎ ಕಾರ್ಯದರ್ಶಿ ಸಂಜಯ್ ಸಹಾಯ್ ತಿಳಿಸಿದ್ದಾರೆ.

ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ಶಾಲಾ ಮಕ್ಕಳಿಗೆ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ರಾಂಚಿ ಮೈದಾನದಲ್ಲಿ ನಡೆಯುತ್ತಿರುವ 2ನೇ ಅಂತಾರಾಷ್ಟ್ರೀಯ ಟೆಸ್ಟ್​ ಪಂದ್ಯ ಇದಾಗಿದೆ.

ಒಟ್ಟು 39,000 ಜನ ಕುಳಿತುಕೊಂಡು ಕ್ರಿಕೆಟ್​ ವೀಕ್ಷಣೆ ಮಾಡಬಹುದಾದ ಮೈದಾನ ಇದಾಗಿದ್ದು, ಅಂತಿಮ ಟೆಸ್ಟ್​ ಪಂದ್ಯ ವೀಕ್ಷಣೆಗೆ ಕೇವಲ 1500 ಮಂದಿ ಮಾತ್ರ ಟಿಕೆಟ್​ ಖರೀದಿ ಮಾಡಿದ್ದಾರೆ ಎನ್ನುವುದು ಇನ್ನೊಂದು ವಿಶೇಷ

ABOUT THE AUTHOR

...view details