ಕರ್ನಾಟಕ

karnataka

ETV Bharat / sports

ಹರಿಣಗಳ ಮೇಲೆ ಟೀಂ ಇಂಡಿಯಾ ಬಿಗಿಹಿಡಿತ: 497ಕ್ಕೆ ಡಿಕ್ಲೇರ್, ಆಫ್ರಿಕಾಗೆ ಆರಂಭಿಕ ಹೊಡೆತ! - ರಾಂಚಿ ಟೆಸ್ಟ್​ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ 497 ರನ್​ಗಳಿಗೆ ಮೊದಲ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಾ ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಹರಿಣಗಳಿಗೆ ಆರಂಭಿಕ ಆಘಾತ

By

Published : Oct 20, 2019, 4:37 PM IST

Updated : Oct 20, 2019, 4:45 PM IST

ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಧೋನಿ ತವರಿನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್​​ ಹಣಾಹಣಿಯಲ್ಲಿ ಟೀಂ ಇಂಡಿಯಾ ಆಟಗಾರರು ಹಿಡಿತ ಸಾಧಿಸಿದ್ದಾರೆ. ರೋಹಿತ್​ ದ್ವಿಶತಕ ಮತ್ತು ರಹಾನೆ ಶತಕದ ನೆರವಿನಿಂದ ಭಾರತ ತಂಡ 497 ರನ್​ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್​ ಮಾಡಿಕೊಂಡಿದೆ.

ಪೆವಿಲಿಯನ್​ನತ್ತ ಹೆಜ್ಜೆ ಹಾಕುತ್ತಿರುವ ಡೀನ್ ಎಲ್ಗರ್

ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್ ಆರಂಭಿಸಿದ ಹರಿಣ ಪಡೆಗೆ ವೇಗಿ ಶಮಿ ಮತ್ತು ಉಮೇಶ್​ ಯಾದವ್ ಶಾಕ್​ ನೀಡಿದ್ದಾರೆ. ಆರಂಭಿಕ ಆಟಗಾರರಾದ ಡೀನ್ ಎಲ್ಗರ್(0), ಕ್ವಿಂಟನ್ ಡಿ ಕಾಕ್(4) ಕ್ರೀಸಿಗೆ ಬಂದಷ್ಟೆ ವೇಗವಾಗಿ ಪೆವಿಲಿಯನ್​ ಸೇರಿಕೊಂಡರು. ಸದ್ಯ ರಾಂಚಿಯಲ್ಲಿ ಮೋಡ ಮುಸುಕಿದ ವಾತಾವರಣವಿದ್ದು ಬೆಳಕಿನ ತೊಂದರೆಯಿಂದ ಎರಡನೇ ದಿನದಾಟ ಕೊನೆಗೊಂಡಿದೆ.

ರೋಹಿತ್ ಶರ್ಮಾ

ನಿನ್ನೆ ಶತಕಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆರಂಭಿಕ ಆಟಗಾರ ರೋಹಿತ್​ ಶರ್ಮಾ(212) ಇಂದು ಟೆಸ್ಟ್​ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದ್ರು. ರಹಾನೆ (115) ಕೂಡ 3 ವರ್ಷಗಳ ನಂತರ ಟೆಸ್ಟ್​​ನಲ್ಲಿ ಶತಕ ಗಳಿಸಿದ್ರು. ದ್ವಿತೀಯ ಟೆಸ್ಟ್​​ನಲ್ಲಿ ಅರ್ಧ ಶತಕ ಸಿಡಿಸಿದ್ದ ರವೀಂದ್ರ ಜಡೇಜಾ ಇಂದು ಕೂಡಾ ಅರ್ಧಶತಕದ ಸಾಧನೆ ಮಾಡಿದ್ರು. ವೇಗಿ ಉಮೇಶ್​ ಯಾದವ್ ಎದುರಿಸಿದ 10 ಬಾಲ್​ಗಳಲ್ಲೆ 5 ಸಿಕ್ಸರ್​ ಸಿಡಿಸಿ ಮಿಂಚಿದ್ರು. ಅಂತಿಮವಾಗಿ ಟೀಂ ಇಂಡಿಯಾ 116.3 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 497 ರನ್​ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್​ ಮಾಡಿಕೊಂಡಿದೆ.

ಉಮೇಶ್​ ಯಾದವ್

ಇತ್ತ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಇಬ್ಬರು ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 5 ಓವರ್​ಗಳಲ್ಲಿ 2 ನಷ್ಟಕ್ಕೆ 9 ರನ್​ಗಳಿಸಿದೆ.

Last Updated : Oct 20, 2019, 4:45 PM IST

ABOUT THE AUTHOR

...view details