ಕರ್ನಾಟಕ

karnataka

ETV Bharat / sports

ಉಮೇಶ್​ ಯಾದವ್​ ಸಿಕ್ಸರ್​ ಸುರಿಮಳೆಗೆ ದಾಖಲೆಗಳು ಉಡೀಸ್​: ಕೊಹ್ಲಿಗೆ ಪರಮಾನಂದ! - ಭಾರತ ದಕ್ಷಿಣ ಆಫ್ರಿಕಾ 3ನೇ ಟೆಸ್ಟ್​

ಇಷ್ಟು ದಿನ ಬೌಲಿಂಗ್​ನಲ್ಲಷ್ಟೆ ಕಮಾಲ್​ ಮಾಡುತ್ತಿದ್ದ ವೇಗಿ ಉಮೇಶ್​ ಯಾದವ್​, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲೂ ಪ್ರತಿಭೆ ಪ್ರದರ್ಶಿಸಿದ್ದಾರೆ.

ಉಮೇಶ್ ಯಾದವ್

By

Published : Oct 20, 2019, 5:43 PM IST

ರಾಂಚಿ: ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದ ವೇಗಿ ಉಮೇಶ್​ ಯಾದವ್ ಮೂರು ದಾಖಲೆಗಳನ್ನ ಪುಡಿಗಟ್ಟಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಮೈದಾನಕ್ಕೆ ಆಗಮಿಸಿದ ಉಮೇಶ್​ ಯಾದವ್​ ಆಕರ್ಷಕ ಸಿಕ್ಸರ್​ಗಳನ್ನು ಸಿಡಿಸಿ ಕೆಲಹೊತ್ತು ಪ್ರೇಕ್ಷಕರನ್ನು ರಂಜಿಸಿದ್ದಲ್ದೇ ಮೂರು ದಾಖಲೆಗಳನ್ನ ತನ್ನದಾಗಿಸಿಕೊಂಡರು.

111.5 ನೇ ಓವರ್​ನಲ್ಲಿ ಜಾರ್ಜ್ ಲಿಂಡೆ ಬೌಲಿಂಗ್​ನಲ್ಲೆ ಎದುರಿಸಿದ ಮೊದಲ ಎರಡೂ ಬಾಲ್​ಗಳನ್ನ ಸಿಕ್ಸರ್​ ಸಿಡಿಸಿದ್ರು. ಅಲ್ಲದೆ 113ನೇ ಓವರ್​ನಲ್ಲಿ ಮತ್ತದೇ ಜಾರ್ಜ್ ಲಿಂಡೆ ಬೌಲಿಂಗ್​ನಲ್ಲಿ 3 ಸಿಕ್ಸರ್‌ ಬಾರಿಸಿ ಕೊನೆಯ ಎಸೆತದಲ್ಲಿ ಔಟ್​ ಆದ್ರು. ಆಡಿದ 10 ಚೆಂಡುಗಳಲ್ಲಿ 31 ರನ್​ ಗಳಿಸಿ ಔಟಾದ್ರು. ಇದು ಟೆಸ್ಟ್​​ ಕ್ರಿಕೆಟ್​ನಲ್ಲಿ ಉಮೇಶ್​ ಯಾದವ್​ ಬೆಸ್ಟ್​​ ಸ್ಕೋರ್​ ಎನಿಸಿದೆ.

ಸಚಿನ್​ ದಾಖಲೆ ಸರಿಗಟ್ಟಿದ ಉಮೇಶ್​:
ಟೆಸ್ಟ್​ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್​ ಮತ್ತು ವೆಸ್ಟ್​ ಇಂಡೀಸ್​ನ ಆಟಗಾರ ಫೊಫಿ ವಿಲಿಯಮ್ಸನ್ ತಾವು​ ಎದುರಿಸಿದ ಮೊದಲ 2 ಚೆಂಡುಗಳನ್ನು ಸಿಕ್ಸರ್‌ಗಟ್ಟಿದ ದಾಖಲೆ ಬರೆದಿದ್ದರು. ಈ ಇಬ್ಬರಂತೆ ಯಾದವ್ ಕೂಡಾ ಇದೀಗ​ ಅಪರೂಪದ ದಾಖಲೆ ಬರೆದಿದ್ದಾರೆ.

ವೇಗದ 30 ರನ್​ ದಾಖಲೆ:
ಟೆಸ್ಟ್​​ ಕ್ರಿಕೆಟ್​​ನಲ್ಲಿ ಅತಿ ವೇಗವಾಗಿ 30 ರನ್​ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಉಮೇಶ್​ ಪಾತ್ರರಾಗಿದ್ದಾರೆ. ಈ ಹಿಂದೆ ಸ್ಟೀಫನ್ ಫ್ಲೆಮಿಂಗ್ 11 ಬಾಲ್​ಗಳಿಗೆ 31 ರನ್​ ಗಳಿಸಿದ್ದರು.

ಉಮೇಶ್​ ಯಾದವ್ ಮತ್ತು ದಕ್ಷಿಣ ಆಫ್ರಿಕಾ ಬೌಲರ್ ಜಾರ್ಜ್ ಲಿಂಡೆ

ಅತಿ ಹೆಚ್ಚು ಸ್ಟೈಕ್​ ರೇಟ್​:
ಟೆಸ್ಟ್​ ಕ್ರಿಕೆಟ್‌ನಲ್ಲಿ ಆಡಿದ 10 ಬಾಲ್​ಗಳಲ್ಲಿ ಅತಿಹೆಚ್ಚು ಸ್ಟ್ರೈಕ್​ ರೇಟ್​ ಹೊಂದಿದ ಆಟಗಾರ ಎಂಬ ಶ್ರೇಯ ಉಮೇಶ್​ ಯಾದವ್ ಹೊಂದಿದ್ದಾರೆ. ಬರೋಬ್ಬರಿ 310 ಸ್ಟ್ರೈಕ್​ ರೇಟ್‌ನೊಂದಿಗೆ 10 ಎಸೆತಗಳಲ್ಲಿ ಅವರು 30 ರನ್​ ಗಳಿಸಿದ್ದಾರೆ. ಇವಿಷ್ಟೇ ಅಲ್ಲ, ತಾನು ಎದುರಿಸಿದ ಮೊದಲನೇ ಚೆಂಡನ್ನು ಸಿಕ್ಸರ್‌ಗಟ್ಟಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಯೂ ಈ ಆಟಗಾರನ ಪಾಲಾಗಿದೆ. ಸಚಿನ್, ಧೋನಿ, ಜಹೀರ್​ ಖಾನ್​ ಈ ಹಿಂದೆ ಮೊದಲ ಬಾಲ್​ನಲ್ಲೇ ಸಿಕ್ಸರ್​ ಹೊಡೆದಿದ್ದರು.

ಒಂದೆಡೆ ಮೈದಾನದಲ್ಲಿ ಉಮೇಶ್​ ಯಾದವ್​ ಭರ್ಜರಿಯಾಗಿ ಬ್ಯಾಟ್​ ಬೀಸುತ್ತಿದ್ದರೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಕುಳಿತಿದ್ದ ನಾಯಕ ವಿರಾಟ್​ ಕೊಹ್ಲಿ ಆನಂದಕ್ಕೆ ಪಾರವೇ ಇರಲಿಲ್ಲ. ಪ್ರತಿಯೊಂದು ಸಿಕ್ಸರ್‌ ಸಿಡಿದಾಗಲೂ ಅವರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸುತ್ತಿದ್ದರು.

ABOUT THE AUTHOR

...view details