ಬೆಂಗಳೂರು: ದಕ್ಷಿಣ ಆಫ್ರಿಕಾದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 72 ರನ್ ಗಳಿಸಿ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಇದೀಗ ಆ ದಾಖಲೆ ಕೇವಲ 8 ರನ್ ಗಳಿಸಿದರೆ ರೋಹಿತ್ ಪಾಲಾಗಲಿದೆ.
ಕಳೆದ ಪಂದ್ಯದಲ್ಲಿ ರೋಹಿತ್ ಕೇವಲ 12 ರನ್ಗಳಿಗೆ ವಿಕೆಟ್ ನೀಡಿದ್ದರಿಂದ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ 2434 ರನ್ ಗಳಿಸಿರುವ ರೋಹಿತ್ ಶರ್ಮಾ ಕೊಹ್ಲಿ(2441)ಗಿಂತ ಕೇವಲ 7 ರನ್ ಹಿಂದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದ್ದು, ಆ ಪಂದ್ಯದಲ್ಲಿ ಹಿಟ್ಮ್ಯಾನ್ ಹೆಸರಿಗೆ ಹೊಸ ದಾಖಲೆ ಸೇರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಇದೇ ಪಂದ್ಯದಲ್ಲಿ ಮತ್ತೋರ್ವ ಆರಂಭಿಕರಾದ ಶಿಖರ್ ಧವನ್ 7000 ರನ್ ಪೂರೈಸಲಿದ್ದಾರೆ. 6996 ರನ್ ಗಳಿಸಿರುವ ಅವರು ಇನ್ನು ಕೇವಲ 4 ರನ್ ಗಳಿಸಿದರೆ ಈ ಮೈಲಿಗಲ್ಲು ತಲುಪಲಿದ್ದಾರೆ. ಅಲ್ಲದೆ ಭಾರತೀಯರಲ್ಲಿ 7000 ರನ್ ಗಳಿಸಿದ ನಾಲ್ಕನೇ ಆಟಗಾರ ಎಂಬ ದಾಖಲೆಯೂ ಧವನ್ ಪಾಲಾಗಿದೆ. ವಿರಾಟ್ ಕೊಹ್ಲಿ(8547), ಸುರೇಶ್ ರೈನಾ(8392) ಹಾಗೂ ರೋಹಿತ್(8303) ಟಿ20 ಕ್ರಿಕೆಟ್ನಲ್ಲಿ 7000 ರನ್ ಗಡಿ ದಾಟಿದವರಾಗಿದ್ದಾರೆ.