ಕರ್ನಾಟಕ

karnataka

ETV Bharat / sports

ಮೂರನೇ ಚುಟುಕು ಸಮರಕ್ಕೆ ಮಳೆ ಭೀತಿ: ಸರಣಿ ವಶಕ್ಕೆ ಕೊಹ್ಲಿ ಬಳಗ ಕಾತರ - ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೆ ಟಿ20 ಪಂದ್ಯ

ಧರ್ಮಶಾಲಾದಲ್ಲಿನ ಮೊದಲ ಟಿ20 ಪಂದ್ಯ ಸಂಪೂರ್ಣ ಮಳೆಗೆ ಆಹುತಿಯಾಗಿದ್ದರೆ, ಎರಡನೇ ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್​ಗಳಿಂದ ನಿರಾಯಾಸವಾಗಿ ಗೆದ್ದಿತ್ತು.

ಕೊಹ್ಲಿ ಬಳಗ

By

Published : Sep 22, 2019, 4:24 PM IST

ಬೆಂಗಳೂರು:ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೆ ಹಾಗೂ ಅಂತಿಮ ಟಿ20 ಪಂದ್ಯ ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೊಹ್ಲಿ ಬಳಗ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದರೆ ಅತ್ತ ಮಳೆಯ ಭೀತಿಯೂ ಎದುರಾಗಿದೆ.

ಪಂದ್ಯ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಇದೇ ವೇಳೆ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ. ನಿರಂತರ ಮಳೆ ಸುರಿದರೆ ಮಾತ್ರ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಸಣ್ಣಮಟ್ಟಿನ ಮಳೆಯಾದಲ್ಲಿ ತಕ್ಷಣವೇ ಮೈದಾನದಿಂದ ನೀರನ್ನು ಹೊರಹಾಕಬಲ್ಲ ಆಧುನಿಕ ತಂತ್ರಜ್ಞಾನವನ್ನು ಈ ಮೈದಾನ ಹೊಂದಿದೆ.

ವಿರಾಟ್ ನೆಚ್ಚಿನ ಮೈದಾನ:

ಆರ್​ಸಿಬಿ ಕಪ್ತಾನ ವಿರಾಟ್ ಕೊಹ್ಲಿಗೆ ಇದು ಅತ್ಯಂತ ನೆಚ್ಚಿನ ಮೈದಾನವಾಗಿದ್ದು, ಇಲ್ಲಿ ಅವರು ಅತ್ಯುತ್ತಮ ರನ್ ದಾಖಲಿಸಿದ್ದಾರೆ. ಈ ಮೈದಾನದಲ್ಲಿ ಒಟ್ಟಾರೆ 88 ಟಿ-20 ಪಂದ್ಯದಲ್ಲಿ ಕೊಹ್ಲಿ 2,573 ರನ್ ಗಳಿಸಿದ್ದಾರೆ.

ABOUT THE AUTHOR

...view details