ವಿಶಾಖಪಟ್ಟಣಂ:ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 502 ರನ್ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ (176 ರನ್) ಹಾಗೂ ಮಯಾಂಕ್ ಅಗರವಾಲ್ (215 ರನ್) ಗಳಿಸಿ ತಂಡಕ್ಕೆ ಮಹತ್ವದ ಕೊಡುಗೆ ನೀಡಿದರು.
ಟೆಸ್ಟ್ ಪಂದ್ಯದಲ್ಲಿ ಮೊದಲ ದ್ವಿಶತಕ ಸಿಡಿಸಿದ ಮಯಾಂಕ್ ಅಗರವಾಲ್ ನಿನ್ನೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 202ರನ್ ಕಲೆ ಹಾಕಿದ್ದ ಇಂಡಿಯಾ ಇಂದು ತನ್ನ ಬ್ಯಾಟಿಂಗ್ ವೈಖರಿ ಮುಂದುವರಿಸಿತು. ಅಜೇಯರಾಗುಳಿದ ರೋಹಿತ್ ಹಾಗೂ ಮಯಾಂಕ್ ಎದುರಾಳಿ ಬೌಲರ್ಗಳನ್ನು ಸರಿಯಾಗಿಯೇ ದಂಡಿಸಿದರು. ಇವರಿಬ್ಬರ ವಿಕೆಟ್ ಉರುಳುತ್ತಿದ್ದಂತೆ ಕ್ರೀಸಿಗೆ ಬಂದ ಪೂಜಾರಾ (6ರನ್), ಕ್ಯಾಪ್ಟನ್ ಕೊಹ್ಲಿ (20ರನ್), ರಹಾನೆ (15ರನ್), ಜಡೇಜಾ ಅಜೇಯ (30ರನ್), ವಿಹಾರಿ (10ರನ್) ವೃದ್ಧಿಮಾನ್ ಸಾಹಾ (21ರನ್) ಹಾಗೂ ಅಶ್ವಿನ್ ಅಜೇಯ (1ರನ್) ರನ್ ಗಳಿಸಿದ್ದಾರೆ.
ಶತಕ ದಾಖಲಿಸಿದ ರೋಹಿತ್ ಶರ್ಮಾ ಅವರನ್ನು ಅಭಿನಂದಿಸುತ್ತಿರುವ ಆಫ್ರಿಕಾ ಆಟಗಾರರು ದಕ್ಷಿಣ ಆಫ್ರಿಕಾ ಪರ ಕೇಶವ್ ಮಹರಾಜ್ 3 ವಿಕೆಟ್ ಪಡೆದುಕೊಂಡರೆ, ಇಲ್ಗರ್, ಮುತ್ತುಸ್ವಾಮಿ, ಡಾನಿ, ಫಿಲ್ಯಾಂಡರ್ ತಲಾ 1ವಿಕೆಟ್ ಪಡೆದುಕೊಂಡರು.
ಇನ್ನೂ ಮೂರು ದಿನಗಳ ಆಟ ಬಾಕಿ ಇರುವ ಕಾರಣ, ಒಂದು ವೇಳೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ ಬೇಗ ವಿಕೆಟ್ ಒಪ್ಪಿಸಿದರೆ ಟೀಂ ಇಂಡಿಯಾ ಮೊದಲ ಟೆಸ್ಟ್ನಲ್ಲಿ ಗೆಲುವು ದಾಖಲಿಸುವುದು ಬಹುತೇಕ ಖಚಿತ.